Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡು ಉತ್ತಮ ಅಂಕಗಳಿಸಬೇಕು : ಸಿದ್ಧಾರೂಢ ಸತೀಶ್ ಗೌಡ

ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡು ನಿಮ್ಮ ಭವಿಷ್ಯ ಉಜ್ವಲವಾಗಲು ಶ್ರಮಿಸುತ್ತಿರುವ ಶಿಕ್ಷಕರಿಗೆ ಸ್ಪಂದಿಸಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾಗ ಬೇಕೆಂದು ಕಾಂಗ್ರೆಸ್ ಮುಖಂಡ ಸಿದ್ಧಾರೂಢ ಸತೀಶ್ ಗೌಡ ಸಲಹೆ ನೀಡಿದರು.

ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ 2022-23 ನೇ ಸಾಲಿನ ಕಲಿಕಾ ಚೇತರಿಕೆ ವರ್ಷದ ಅಂಗವಾಗಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಶಿಸ್ತನ್ನು ರೂಢಿಸಿಕೊಂಡು ವಿದ್ಯಾಭ್ಯಾಸ ಮಾಡಬೇಕು. ಶಿಕ್ಷಕರು ಹತ್ತಾರು ಕಿ.ಮೀ ದೂರದಿಂದ ಬಂದು ತಮ್ಮ ಮಕ್ಕಳನ್ನು ಪೋಷಿಸಿದಂತೆ ನಿಮ್ಮನ್ನು ಕೂಡ ಪೋಷಿಸಿ ಶಿಕ್ಷಣ ನೀಡುತ್ತಾರೆ. ನಿಮ್ಮ ಭವಿಷ್ಯ ಉಜ್ವಲ ವಾಗಲಿ ಎಂದು ಶ್ರಮಿಸುವ ಶಿಕ್ಷಕರಿಗೆ ಮಕ್ಕಳು ಕೂಡ ಸ್ಪಂದಿಸಿ, ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳು ಕಲಿಯುವ ಸಮಯದಲ್ಲಿ ಏಕಾಗ್ರತೆ ರೂಢಿಸಿಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿದರೆ ಯಶಸ್ಸು ಸಾಧ್ಯ. ಉತ್ತಮ ಅಂಕ ಗಳಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉನ್ನತ ಹುದ್ದೆ ಪಡೆದು ಶಿಕ್ಷಕರಿಗೆ, ಪೋಷಕರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ತಿಮ್ಮೇಗೌಡ,ಪ್ರಾಂಶುಪಾಲ ಚಂದ್ರಶೇಖರಯ್ಯ,ಉಪ ಪ್ರಾಂಶುಪಾಲರಾದ ರುಕ್ಮಿಣಿ, ಮುಖ್ಯ ಶಿಕ್ಷಕ ಮೋಹನ್ ಮತ್ತಿತರರಿದ್ದರು.

ಕಲಿಕಾ ಹಬ್ಬ

ಬಸರಾಳು ಹೋಬಳಿಯ ಶಿವಪುರದ ಸರ್ಕಾರಿ ಪ್ರೌಢಶಾಲೆ ಉತ್ತರ ವಲಯದಲ್ಲಿ ಕಲಿಕಾ ಹಬ್ಬವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಂ. ಜೆ. ಸಿದ್ಧಾರೂಢ ಸತೀಶ್ ಗೌಡ ಉದ್ಘಾಟಿಸಿ ಮಕ್ಕಳಿಗೆ ಅನೇಕ ಉಪಯುಕ್ತ ಸಲಹೆಗಳನ್ನು ನೀಡಿದರು.

ಕಲಿಕಾ ಜಾತ್ರೆಯಲ್ಲಿ ಕಳಸ ಹೊತ್ತ ಶಾಲಾ ಚಿಣ್ಣರ ಜೊತೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಬಿಇಒ
ಸೌಭಾಗ್ಯ, ಶಿವಪುರ ಪಂಚಾಯತಿ ಅಧ್ಯಕ್ಷ ರೇವಣ್ಣ, ಮುಖ್ಯ ಶಿಕ್ಷಕ ಶಶಿಧರ್ ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!