ಸಿಕ್ಕಿಂನಲ್ಲಿ ಪ್ರಯಾಣಿಸುತ್ತಿದ್ದ ಸೇನಾ ಟ್ರಕ್ ಕಮರಿಗೆ ಬಿದ್ದು ಮೂವರು ಅಧಿಕಾರಿಗಳು ಸೇರಿ 16 ಸೈನಿಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಇಂದು ಬೆಳಗ್ಗೆ ಸಿಕ್ಕಿಂ ನ ಚಟೆನ್ ನಿಂದ ಥಂಗು ಕಡೆಗೆ ಚಲಿಸುತ್ತಿದ್ದ ಮೂರು ವಾಹನಗಳಲ್ಲಿ ಬೆಂಗಾವಲು ಟ್ರಕ್ ಆಯಾ ತಪ್ಪಿ ಕಮರಿಗೆ ಊರುಳಿದೆ ಎಂದು ಸೇನೆಯು ಹೇಳಿಕೆ ನೀಡಿದೆ.
ಉತ್ತರ ಸಿಕ್ಕಿಂ ನ ಝೆಮಾದಲ್ಲಿ ಸಾಗುತ್ತಿದ್ದಾಗ ವಾಹನವು ತೀಕ್ಷ್ಣವಾದ ತಿರುವಿನ ಕಡಿದಾದ ಇಳಿಜಾರಿಗೆ ಬಿದ್ದಿದೆ. ಕೂಡಲೆ ರಕ್ಷಣಾ ಕಾರ್ಯಾವಾರಣೆಯನ್ನು ಆರಂಭಿಸಿ ಗಾಯಗೊಂಡ ನಾಲ್ವರನ್ನು ಹೆಲೆಕಾಪ್ಟರ್ ಮೂಲಕ ಆಸ್ಪಗ್ರೆೆ ಸ್ಥಲಾಂತರಿಸಲಾಗಿದೆ. ಮೃತಪಟ್ಟ ಸೈನಿಕರ ಕುಟುಂಬದೋಂದಿದೆ ಭಾರತೀಯ ಸೇನೆ ಇರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೃತಪಟ್ಟ ಸೈನಿಕರ ಕುರಿತು ರಾಷ್ಟ್ರಪತಿ ಮತ್ತು ಪ್ರಧಾನಿ ಕಾರ್ಯಾಲಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.