Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಾಜಮುಖಿ ಕೆಲಸಗಳಿಂದ ಬದುಕು ಅರ್ಥಪೂರ್ಣ : ಸಿದ್ದರೂಢ ಸತೀಶ್ ಗೌಡ

ಗ್ರಾಮೀಣ ಪ್ರದೇಶದ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಬದುಕು ಅರ್ಥಪೂರ್ಣವಾಗುತ್ತದೆ ಮಾಚಗೌಡನಹಳ್ಳಿ ನನ್ನ ಜನ್ಮ ಭೂಮಿಯಾಗಿದ್ದು ಕಾಲಭೈರವೇಶ್ವರ ಯುವಕರ ಸಂಘ ಹಮ್ಮಿಕೊಂಡಿರುವ ಜನೋಪಯೋಗಿ ಕಾರ್ಯಕ್ರಮಗಳು ಆತ್ಮ ಸಂತೋಷ ನೀಡಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದರೂಢ ಸತೀಶ್ ಗೌಡ ಹೇಳಿದರು.

ಮಂಡ್ಯ ತಾಲೂಕಿನ ಮಾಚಗೌಡನ ಹಳ್ಳಿಯಲ್ಲಿ ಕಾಲಭೈರವೇಶ್ವರ ಯುವಕರ ಸಂಘ, ಆದಿಚುಂಚನಗಿರಿ ಮೆಡಿಕಲ್ ಕಾಲೇಜ್, ಜೀವಧಾರೆ ಟ್ರಸ್ಟ್ ಸಹಯೋಗದೊಂದಿಗೆ 67ನೇ ಕನ್ನಡ ರಾಜ್ಯೋತ್ಸವ, ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಕುಗ್ರಾಮದಲ್ಲಿ ಯುವಕರು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ ಜೊತೆಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದಾರೆ ಬಿಪಿ, ಸಕ್ಕರೆ ಕಾಯಿಲೆ ಕಣ್ಣಿನ ಸಮಸ್ಯೆ ಇರುವವರು ಬಸರಾಳು ಹೋಬಳಿಯಿಂದ ನೂರಾರು ಮಂದಿ ಬಂದು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ ,ಇದು  ಉಪಯುಕ್ತ  ಕೆಲಸವಾಗಿದೆ ಎಂದರು.

ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್.ರೇವಣ್ಣ ಧ್ವಜಾರೋಹಣ ಮಾಡಿ ಹೈ ಮಾಸ್ಟ್ ಲೈಟ್ ಉದ್ಘಾಟಿಸಿದರು.

ಮಾಚಗೌಡನ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಇದೇ ವೇಳೆ ಹೆಸರಾಂತ ಮೂಳೆ ಮತ್ತು ಕೀಲು ತಜ್ಞರಾದ ಡಾ.ಹೆಚ್.ಎಸ್.ರವಿಕುಮಾರ್ ಅವರು ರಕ್ತದಾನ ಮಾಡಿ ಮಾದರಿಯಾದರು.  ಜೊತೆಗೆ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಹಾಗೂ ಸುಯೋಗ ಆಸ್ಪತ್ರೆಯ ವೈದ್ಯರು, ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಗ್ರಾಮದ ನೂರಾರು ಮಂದಿಗೆ ಆರೋಗ್ಯ ತಪಾಸಣೆ ಮಾಡಿದರು.

ಇದೇ ವೇಳೆ ಶಂಕರೇಗೌಡ, ಸಂತೋಷ್, ಗುರುರಾಜ್, ಮಹಾಲಿಂಗಯ್ಯ, ಚಿಕ್ಕಬೋರೆಗೌಡ ಸೇರಿದಂತೆ ಹಲವಾರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!