Saturday, November 21, 2026

ಪ್ರಾಯೋಗಿಕ ಆವೃತ್ತಿ

ಸಮಾಜಸೇವೆಗೆ ಅಧಿಕಾರ ಬೇಕಿಲ್ಲ, ಹೃದಯ ಶ್ರೀಮಂತಿಕೆ ಇದ್ದರೆ ಸಾಕು: ದಡದಪುರ ಶಿವಣ್ಣ

ಸಮಾಜಸೇವೆಗೆ ಅಧಿಕಾರ ಇರಲೇಬೇಕೆಂದೇನಿಲ್ಲ ಹೃದಯ ಶ್ರೀಮಂತಿಕೆ ಇದ್ದರೆ ಅಷ್ಟೇ ಸಾಕು ಎಂದು ಕೆಪಿಸಿಸಿ‌ ಪ್ರಧಾನ ಕಾರ್ಯದರ್ಶಿ, ರಾಮ ಮನೋಹರ ಲೋಹಿಯಾ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರಿನ ಬೋಗಾದಿಯಲ್ಲಿರುವ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ ಸಂಸ್ಥೆಯಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

ಕಳೆದ ತಿಂಗಳು ಮೈಸೂರಿನ ಭೋಗಾದಿ ಯಲ್ಲಿನ Parents Association of Deaf & Dumb ಎಂಬ ಸಂಸ್ಥೆಗೆ ಭೇಟಿ ನೀಡಿದ ವೇಳೆ ಪದಾಧಿಕಾರಿಗಳು ಹಾಗೂ ಪೋಷಕರು ಇಲ್ಲಿರುವ ಬಡ ಕುಟುಂಬದ Deaf & Dumb (ಮಾತು ಬಾರದ ಮತ್ತು ಕಿವಿ ಕೇಳದ ) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ನಾನು ವೈಯುಕ್ತಿಕವಾಗಿ ನನ್ನ ಸ್ವಂತ ಹಣದಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಉಚಿತವಾಗಿ ಲ್ಯಾಪ್‌ಟಾಪ್ ಕೊಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಇಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿರುವುದು ಸಂತೋಷ ತಂದಿದೆ ಎಂದರು.

nudikarnataka.com

ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿ, ಶಿವಣ್ಣನವರು ಕೊಟ್ಟ ಮಾತಿನಂತೆ ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಯಾವುದೇ ತಂತ್ರಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 20 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ಕೊಟ್ಟು ಅವರೆಲ್ಲರ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಕೋರಿದ ಮಳವಳ್ಳಿ ಶಿವಣ್ಣನವರಿಗೆ ಧನ್ಯವಾದಗಳನ್ನು ತಿಳಿಸಿದರು.

ಲ್ಯಾಪ್‌ಟಾಪ್ ವಿತರಣೆ ವೇಳೆ ಹಾಜರಿದ್ದ ವಿದ್ಯಾರ್ಥಿಗಳ ಪೋಷಕರು, ಎಲೆಮರೆ ಕಾಯಿಯಂತೆ ಬಡವರ, ವಿದ್ಯಾರ್ಥಿಗಳ ಸೇವೆಯಲ್ಲಿ ನಿರತರಾಗಿರುವ ಮಳವಳ್ಳಿ ಶಿವಣ್ಣನವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ