Friday, November 20, 2026

ಪ್ರಾಯೋಗಿಕ ಆವೃತ್ತಿ

ಮನೆಬಿಟ್ಟು ಓಡಿಹೋದ ಪ್ರೇಮಿಗಳು: ಯುವತಿಯ ತಂದೆ ಆತ್ಮಹತ್ಯೆ

ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡ ಪ್ರೇಮಿಗಳ ವರ್ತನೆಯಿಂದ ಮನನೊಂದ ಪುತ್ರಿಯ ತಂದೆ ರವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಿ.ಬಾಚಹಳ್ಳಿ ಗ್ರಾಮದ ಮುಖಂಡ ಪ್ರಗತಿಪರ ರೈತ ರವಿ ಅವರ ಪುತ್ರಿ ಕೀರ್ತನ(21) ಮತ್ತು ಅಭಿ(28)ಪರಸ್ಪರ ಪ್ರೀತಿಸುತ್ತಿದ್ದು, ಐದು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು.

ಕಳೆದ ಐದು ದಿನಗಳ ಹಿಂದೆಯೇ ನಾಪತ್ತೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ರವಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಮಗಳು ಮರ್ಯಾದೆ ಕಳೆದಳೆಂದು ರವಿ ಬುಧವಾರ (47)ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿ.ಬಾಚಹಳ್ಳಿಯ ನೂರಾರು ಗ್ರಾಮಸ್ಥರು ಠಾಣೆಯ ಮುಂದೆ ಮೃತ ರವಿಯ ಶವವಿಟ್ಟುಕೊಂಡು ಪ್ರತಿಭಟನೆ ನಡೆಸಿ ಮಗಳು ಮತ್ತು ಆಕೆಯ ಪ್ರಿಯಕರ ಅಭಿ ಅವರನ್ನು ಕರೆ ತರುವಂತೆ ಒತ್ತಾಯಿಸಿದರು. ಇದರಿಂದಾಗಿ
ಪೋಲಿಸ್ ಠಾಣೆಯ ಮುಂದೆ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಶೀಘ್ರವೇ ಮನೆ ಬಿಟ್ಟು ಓಡಿ ಹೋಗಿರುವ ಅಭಿ ಮತ್ತು ಕೀರ್ತನಾ ಅವರನ್ನು ಕರೆತರುವ ಭರವಸೆ ನೀಡಿದ ಪೋಲಿಸ್ ಇನ್ಸ್ ಸ್ಪೆಕ್ಟರ್ ಕೆ.ಎಸ್.ನಿರಂಜನ ಅವರ ಆಶ್ವಾಸನೆಯ ಮೇರೆಗೆ ಪ್ರತಿಭಟನೆ ಕೈಬಿಟ್ಟು ರವಿಯವರ ಅಂತ್ಯಕ್ರಿಯೆ ನಡೆಸಲು ಊರಿಗೆ ತೆರಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ