Friday, September 20, 2024

ಪ್ರಾಯೋಗಿಕ ಆವೃತ್ತಿ

ಸಾಫ್ಟ್ ಬಾಲ್ ಕ್ರೀಡೆಗೆ ಉತ್ತೇಜನ ಉತ್ತಮ ಬೆಳವಣಿಗೆ- ವಿಜಯ್ ಆನಂದ

ವಿದೇಶಿ ಕ್ರೀಡಾಪಟುಗಳ ನೆಚ್ಚಿನ ಕ್ರೀಡೆಯಾಗಿದ್ದ ಸಾಫ್ಟ್ ಬಾಲ್ ಕ್ರೀಡೆಗೆ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹಾಗೂ ನೆರೆಹೊರೆ ಜಿಲ್ಲೆಗಳಲ್ಲಿ ಉತ್ತೇಜನ ದೊರೆಯುತ್ತಿರುವುದು ಸಂತಸದ ವಿಚಾರ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅಭಿಪ್ರಾಯಿಸಿದರು.

ಮಂಡ್ಯ ನಗರದ ಪಿ.ಇ.ಟಿ. ಕ್ರೀಡಾಂಗಣದಲ್ಲಿ ಪಿ.ಇ.ಟಿ. ಟ್ರಸ್ಟ್ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು, ಪಿ.ಇ.ಟಿ. ದೈಹಿಕ ಶಿಕ್ಷಣ ವಿಭಾಗ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿ.ಟಿ.ಯು. ಅಂತರ ಕಾಲೇಜು, ಬೆಂಗಳೂರು ವಲಯ, ರೆಸ್ಟ್ ಆಫ್ ಬೆಂಗಳೂರು ವಲಯ ಹಾಗೂ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಸಾಫ್ಟ್ ಬಾಲ್ ಚಾಂಪಿಯನ್ ಶಿಫ್ ಹಾಗೂ ವಿ.ಟಿ.ಯು ರಾಷ್ಟ್ರೀಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಿ.ಇ.ಟಿ ಅಧ್ಯಕ್ಷ ಕೆ. ಎಸ್. ವಿಜಯಾನಂದ ಆಟಗಾರರನ್ನು ಪರಿಚಯ ಮಾಡಿಕೊಂಡು ಮಾತನಾಡಿದರು.

ಆಯ್ಕೆ ಪ್ರಕ್ರಿಯೆಯಲ್ಲಿ 20 ತಂಡಗಳು ಭಾಗವಹಿಸಿದ್ದು, ಮಾಜಿ ಅಂತರರಾಷ್ಟ್ರೀಯ ಸಾಫ್ಟ್ ಬಾಲ್ ಹಾಗೂ ಬೇಸ್ ಬಾಲ್ ಆಟಗಾರರಾದ ಹಾಗೂ ತರಬೇತುದಾರರಾದ ಪಿ. ಗೋಪಿನಾಥ್ ರವರನ್ನು ಪಿ.ಇ.ಟಿ. ಸಂಸ್ಥೆಯ ಅಧ್ಯಕ್ಷರಾದ ಕೆ. ಎಸ್ ವಿಜಯಾನಂದರವರು ಅಭಿನಂದಿಸಿದರು.

ಇಂದು ನಡೆದ ಈ ಕ್ರೀಡಾಕೂಟದಲ್ಲಿ ಒಟ್ಟು ಪುರುಷರ ವಿಭಾಗದಲ್ಲಿ 19 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 10 ತಂಡಗಳು ಭಾಗವಹಿಸಿದ್ದವು.

ಇದೇ ಸಂದರ್ಭದಲ್ಲಿ ಪಿ.ಇ. ಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಎಮ್. ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ. ಎಸ್. ವಿನಯ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಅನಂತ ಪದ್ಮನಾಭ ಪ್ರಭು, ಸಹಾಯಕ ನಿರ್ದೇಶಕಿ ಆರ್. ವಿ. ವಿದ್ಯಾ, ಮೈಸೂರು ಸಾಫ್ಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಜಿ.ಎಲ್. ರಘುನಾಥ್ ಹಾಗೂ ರಾಜ್ಯದ ಎಲ್ಲಾ ತಾಂತ್ರಿಕ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ತರಬೇತುದಾರರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!