ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರೋಟರಿ ಸಂಸ್ಥೆ, ಕಾವೇರಿ ಯುವತಿ ಮತ್ತು ಮಹಿಳಾ ಮಂಡಳಿ ಹುಲಿವಾನ. ರಾಷ್ಟ್ರೀಯ ಸೇವಾ ಯೋಜನಾ ಘಟಕ. ಸಕಾ೯ರಿ ಮಹಿಳಾ ಕಾಲೇಜು.ಬ್ಯಾಂಕ್ ಆಫ್ ಬರೋಡ ಲೀಡ್ ಬ್ಯಾಂಕ್ ಇವರ ಸಹಯೋಗದಲ್ಲಿ ‘ನನ್ನ ಮಣ್ಣು, ನನ್ನ ದೇಶ’ದ ಕಾರ್ಯಕ್ರಮದ ಅಂಗವಾಗಿ ಅಮೃತ ಕಳಸ ಯಾತ್ರೆ ಹಾಗೂ ಮಣ್ಣು ಸಂಗ್ರಹ ಕಾರ್ಯಕ್ರಮ ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದಲ್ಲಿ ನಡೆಯಿತು.
ಮಣ್ಣು ಸಂಗ್ರಹ ಕಾರ್ಯಕ್ಕೆ ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಭಾರತದ ಅಮೃತ ಮಹೋತ್ಸವದ ಅಂಗವಾಗಿ ಹಲವಾರು ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಕೊನೆಯ ಕಾಯ೯ಕ್ರಮ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಗಸ್ಟ್ ಮೊದಲ ವಾರದಿಂದ ಅಂತ್ಯದವರೆಗೆ ಯಶಸ್ವಿಯಾಗಿ ನಡೆದಿದೆ. ಇದೀಗ ಕೊನೆಯ ಘಟ್ಟದಲ್ಲಿ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ದೇಶದ 5,933 ಸ್ಥಳಗಳಲ್ಲಿ ಮಣ್ಣು ಸಂಗ್ರಹ ಮಾಡಲಾಗಿದೆ. ಇದೀಗ ಸಂಗ್ರಹಿಸಿದ ಮಣ್ಣನ್ನು ಇದೇ ತಿಂಗಳ ಕೊನೆಯಲ್ಲಿ ಎರಡು ವಿಶೇಷ ರೈಲುಗಳಲ್ಲಿ ಆಯ್ದ 2,850 ಪ್ರತಿನಿಧಿಯೊಂದಿಗೆ ಕನಾ೯ಟಕದಿಂದ ದೆಹಲಿಗೆ ಕಳುಹಿಸಲಾಗುತ್ತದೆ. ಅವರು ದೆಹಲಿಯಲ್ಲಿ ನಡೆಯಲಿರುವ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ದೇಶದಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ವಾಟಿಕಾ ನಿಮಾ೯ಣಕ್ಕೆ ಬಳಕೆ ಮಾಡಲಾಗುತ್ತದೆ ಎಂದರು…
ಬ್ಯಾಂಕ್ ಆಫ್ ಬರೋಡ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್ ಮಾತನಾಡಿ, ಸಕಾ೯ರದ ಆದೇಶದಂತೆ ಪ್ರತಿ ಗ್ರಾಮ ಪಂಚಾಯಿತಿಯಿಂದ ಮಣ್ಣನ್ನು ಸಂಗ್ರಹಿಸಿ ಅಮೃತ ಉದ್ಯಾನದ ನಿಮಾ೯ಣದ ಬಳಕೆಗಾಗಿ ಕಳುಹಿಸಲಾಗುತ್ತದೆ ಎಂದರು.
ರೋಟರಿ ಕ್ಲಬ್ ಜಿಲ್ಲಾಧ್ಯಕ್ಷೆ ಬಿ.ಎಸ್.ಅನುಪಮ ಮಾತನಾಡಿ, ದೇಶದ ಅಮೃತ ಮಹೋತ್ಸವದ ಅಂಗವಾಗಿ ವರ್ಷ ಪೂರ್ತಿ ಹಲವಾರು ಕಾಯ೯ಕ್ರಮಗಳ ಜೊತೆ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಮಣ್ಣನ್ನು ಸಂಗ್ರಹಿಸಿ ದೇಶದ ಏಕತೆಯನ್ನು ಸಾರುವ ಅಮೃತ ಉದ್ಯಾನದ ನಿಮಾ೯ಣಕ್ಕೆ ಬಳಕೆಗೆ ಮಾಡಲಾಗುತ್ತದೆ ಎಂದರು.
ಕಾಯ೯ಕ್ರಮದಲ್ಲಿ ನೆಹರು ಯುವ ಕೇಂದ್ರ ಅಧಿಕಾರಿ ರಾಜೇಶ್ ಕಾರಂತ್, ಎನ್ ಎಸ್ ಎಸ್ ಅಧಿಕಾರಿ ಡಾ.ಕೆಂಪಮ್ಮ, ಮಂಜುಳಾ, ಶಶಿಕಲಾ, ಎನ್ ವೈ ಕೆ ಹಷ೯, ಚಿಂದಾಗಿರಿಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಪ್ರಶಾಂತ್, ರೋಟರಿ ಕಾಯ೯ದಶಿ೯ ರಾಜೇಶ್ ಸೇರಿದಂತೆ ಹುಲಿವಾನ ಗ್ರಾಮಸ್ಥರು ಹಾಜರಿದ್ದರು.




