Monday, May 20, 2024

ಪ್ರಾಯೋಗಿಕ ಆವೃತ್ತಿ

ವಾಟಾಳ್ ನಾಗರಾಜ್ ಗೆ “ಭುವನೇಶ್ವರಿ ವರಪುತ್ರ” ಬಿರುದು ಪ್ರದಾನ

ವರದಿ: ನ.ಲಿ.ಕೃಷ್ಣ

ಕನ್ನಡ ಚಳವಳಿಯ ಧೀಮಂತ ನಾಯಕ ವಾಟಾಳ್ ನಾಗರಾಜ್ ಅವರ ನಾಡು, ನುಡಿ, ನೆಲ ಜಲದ ರಕ್ಷಣೆಗಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಮದ್ದೂರಿನ ಪ್ರಗತಿ ಪರ ಸಂಘಟನೆಗಳ ಒಕ್ಕೂಟವು ಅವರಿಗೆ “ಭುವನೇಶ್ವರಿಯ ವರಪುತ್ರ” ಬಿರುದು ನೀಡಿ ಮದ್ದೂರು ತಾಲ್ಲೂಕಿನ ಸಮಸ್ತ ನಾಗರೀಕರ ಪರವಾಗಿ ಆಭಿನಂದಿಸಿತು.

ಮದ್ದೂರಿನ ರಾಜಕೀಯ ಶಕ್ತಿ ಕೇಂದ್ರ ಆಲದಮರದ ಬಳಿ ನಡೆದ ಕಾರ್ಯಕ್ರಮದಲ್ಲಿ ಬಿರುದು ಪ್ರದಾನ ಮಾಡಲಾಯಿತು, ಇದಕ್ಕೂ ಮುನ್ನ ನಿಡಘಟ್ಟ ಗಡಿಯಿಂದ ವಾಟಾಳ್ ನಾಗರಾಜ್ ಮತ್ತವರ ಕನ್ನಡದ ಸೈನಿಕರನ್ನು ಸ್ವಾಗತಿಸಲಾಯಿತು.

ಪ್ರಗತಿಪರ ಸಂಘಟನೆಯವರು ಬೈಕ್ ಜಾಥದ ಮೂಲಕ ಮೆರವಣಿಗೆಯಲ್ಲಿ ಕಾವೇರಿ ಪರ ಘೊಷಣೆಗಳೊಂದಿಗೆ ಮೆರವಣಿಗೆಯನ್ನು ಸಂಜಯ ಚಿತ್ರಮಂದಿರದ ಬಳಿಯ ಆಲದ ಮರದ ಬಳಿ ಕರೆತಂದರು, ವಾಟಾಳ್ ಅವರು ಪಟ್ಟಣ ಪ್ರವೇಶಿಸುತ್ತಿದ್ದಂತೆ ಸೇರಿದ್ದ ಜನಸ್ತೋಮವು ಹರ್ಷೊದ್ಘಾರ ಮಾಡಿ ಸ್ವಾಗತಿಸಿತು.

ಸರ್ಕಾರದ ಕ್ರಮ ಖಂಡನೀಯ

ಈ ಸಂದರ್ಭದಲ್ಲಿ ಮಾತನಾಡಿ ವಾಟಾಳ್ ನಾಗರಾಜು, ತೀವ್ರ ಸಂಕಷ್ಠದ ಪರಿಸ್ಥಿತಿ ಕುಡಿಯುವ ನೀರಿಗೆ ತೊಂದರೆ ಇರುವ ವೇಳೆಯಲ್ಲಿ‌ನಾಡಿನ ಜನರ ಹಿತ ಮರೆತು, ತಮಿಳುನಾಡಿಗೆ ನೀರು ಹರಿಸುತಿರುವ ಕರ್ನಾಟಕ ಸರ್ಕಾರದ ಕ್ರಮ ಖಂಡನೀಯ ಎಂದರು.

ಇಂದಿನ ಕೆ ಆರ್ ಎಸ್ ಮುತ್ತಿಗೆ ಕಾರ್ಯಕ್ರಮದ ನಂತರ ಮುಂದಿನ ವಾರ ತಮಿಳುನಾಡು- ಕರ್ನಾಟಕ ಗಡಿ ಬಂದ್ ಚಳವಳಿ ಹಮ್ಮಿಕ್ಕೊಳ್ಳುವ ಮೂಲಕ ಸರ್ಕಾರಕ್ಕೆ ಚಳವಳಿಯ ಬಿಸಿ ಮುಟ್ಟಿಸುವ ಎಚ್ಚರಿಕೆ ನೀಡಿದರು

ಮದ್ದೂರು ಚಳವಳಿಯಲ್ಲಿ ತನ್ನದೆ ಇತಿಹಾಸವನ್ನು ವಿಶಿಷ್ಠತೆಯನ್ನು ಹೊಂದಿದೆ, ಅದಕ್ಕೆ ಅನುಗುಣವಾಗಿ ಕಾವೇರಿ ಚಳವಳಿಯಲ್ಲಿ ಮದ್ದೂರು ತಾಲ್ಲೂಕಿನ ಜನತೆ ತೀವ್ರವಾಗಿ ಸ್ಪಂದಿಸಿದೆ ಎಂದು ಅಭಿಮಾನ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸುಮುಖ ಟ್ರಸ್ಟ್ ಕುಮಾರ್ ಶಂಕರಪುರ ಅವಿನಾಶ್, ದಲಿತ ಸಂಘರ್ಷ ಸಮಿತಿಯ ಶಿವರಾಜ್ ಮರಳಿಗ, ರಘು, ವೆಂಕಟೇಗೌಡ, ಒಕ್ಕಲಿಗರ ಸಂಘದ ನಾರಾಯಣ್, ಛಲವಾದಿ ಮಹಾಸಭಾದ ಮಹದೇವ್ ಹುಲಿಗೆರೆಪುರ, ಸೊ ಶಿ ಪ್ರಕಾಶ್, ಉಮಾಶಂಕರ್, ಬಿ ವಿ ಶಂಕರೇಗೌಡ, ದಯಾನಂದ್, ಉಮೇಶ್, ಚಂದ್ರಹಾಸ್, ಕೆಂಪೇಗೌಡ ತಿಪ್ಪೂರು ಮಹೇಶ್, ಗೊರವನಹಳ್ಳಿ ಪ್ರಸನ್ನ, ನ.ಲಿ.ಕೃಷ್ಣ, ರಾಮಲಿಂಗೇಗೌಡ, ಉಮೇಶ್, ರೈತಸಂಘ ಕೊತ್ತನಹಳ್ಳಿ ಉಮೇಶ್, ಶಿವು, ಡಿ ಎಸ್ ಎಸ್ ವಿಶ್ವ ಕರ್ಮ ಸಂಘಟನೆ ಮಹೇಶ್ ಹುಲಿಗೆರೆಪುರ, ಕುಮಾರ್, ಕುಳುವ ಸಮಾಜದ ಮಹೇಶ್ ಮತ್ತಿತರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!