ಬರೋಬರಿ 8 ಸಾವಿರ ಕಿ.ಮೀ ದೂರದ ಲಂಡನ್ ನಿಂದ ಕರ್ನಾಟಕದ ಮಂಡ್ಯಕ್ಕೆ ಬಂದು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಮಂಡ್ಯದ ಯುವತಿಯೊಬ್ಬರು ಅಚ್ಚರಿ ಮೂಡಿಸಿದ್ದಾರೆ.
ಲಂಡನ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿರುವ ಮೂಲತಃ ಮಂಡ್ಯ ತಾಲ್ಲೂಕಿನ ಕಾಳೇನಹಳ್ಳಿಯ ಸೋನಿಕಾ ಶುಕ್ರವಾರ ಮಂಡ್ಯಕ್ಕೆ ಬಂದು ಓಟು ಹಾಕುವ ಮೂಲಕ ಮತದ ಮಹತ್ವವನ್ನು ಸಾರಿದ್ಧಾರೆ.
ಕಳೆದ ಎರಡು ವರ್ಷಗಳ ಹಿಂದೆ ಲಂಡನ್ ಗೆ ಉದ್ಯೋಗಕ್ಕಾಗಿ ತೆರಳಿದ್ದ ಸೋನಿಕಾ, ಅಲ್ಲಿಯೇ ನೆಲೆಸಿದ್ದರು, ತಮ್ಮ ಸಹೋದರ ನೀಡಿದ ಮತದಾನದ ಅರಿವನ್ನು ಪಡೆದುಕೊಂಡ ಈಕೆ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಧಾವಿಸಿ ಮತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಯುರೋಪ್ ಖಂಡದಲ್ಲಿರುವ ಲಂಡನ್ ನಗರಕ್ಕೂ ಹಾಗೂ ಏಷ್ಯಾಖಂಡದಲ್ಲಿ ಮಂಡ್ಯನಗರಕ್ಕೂ ಇರುವ ಬರೋಬರಿ ದೂರ 8130 ಕಿಲೋ ಮೀಟರ್ ಗಳಾಗಿವೆ ಎಂಬುದು ಇಲ್ಲಿ ಗಮನಾರ್ಹ ವಿಚಾರ.