ಜೂನ್ 3 ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ 20 ಮಂದಿ ಉಮೇದುವಾರರ ನಾಮಪತ್ರ ಕ್ರಮಬದ್ಧವಾಗಿದೆ.
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ಉಮೇದುವಾರ ರಾಗಿ ಜಿಎಂ ಮಧು ಕಾಂಗ್ರೆಸ್, ಎಂ.ವಿ. ರವಿಶಂಕರ್ ಬಿಜೆಪಿ,ಹೆಚ್.ಕೆ.ರಾಮು ಜನತಾದಳ (ಜಾತ್ಯಾತೀತ)ನಾಮಪತ್ರ ಕ್ರಮಬದ್ಧವಾಗಿದೆ.
ನೋಂದಾಯಿತ ರಾಜಕೀಯ ಪಕ್ಷಗಳ ಉಮೇದುವಾರರಾಗಿ ರಫತ್ ಉಲ್ಲಾಖಾನ್ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ,ವಾಟಾಳ್ ನಾಗರಾಜ್ ಕನ್ನಡ ಚಳುವಳಿ ವಾಟಾಳ್ ಪಕ್ಷ, ವೀರಭದ್ರಸ್ವಾಮಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ) ಉಮೇದುವಾರಿಕೆ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಅಮ್ಜದ್ ಖಾನ್,ಡಾ. ಅರುಣ್ ಕುಮಾರ್ ಜೆ, ಕಾವ್ಯಶ್ರೀ ಸಿ, ಡಾ.ಬಿ.ಎಚ್. ಚನ್ನಕೇಶವ ಮೂರ್ತಿ, ಪುಟ್ಟಸ್ವಾಮಿ, ಪ್ರಸನ್ನ ಎನ್. ಕೆ.ಪಿ. ಪ್ರಸನ್ನಕುಮಾರ್, ಮಹೇಶ್ ಎಂ,ಡಾ. ರವೀಂದ್ರ ಜೆ.ಸಿ.,ಎನ್.ರಾಜೇಂದ್ರ ಸಿಂಗ್ ಬಾಬು, ರಾಮು ಎಸ್, ಎನ್.ಎಸ್. ವಿನಯ್,ಡಾ. ಎಚ್.ಎಲ್. ವೆಂಕಟೇಶ, ಸುಜಾತ ಎಚ್.ಪಿ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ,ಮೈಸೂರು ವಿಭಾಗದ ಡಾ. ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.