Thursday, June 13, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ| ಅರ್ಹ ಮತದಾರರ ಹೆಸರು ನೋಂದಣಿಗೆ ಮೇ 6 ಕೊನೆ ದಿನ

ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಅರ್ಹ ಶಿಕ್ಷಕ ಮತದಾರರ ಪರಿಷ್ಕರಣೆ ನಡೆಸಿ ಡಿಸೆಂಬರ್ 30 ರಂದು ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮೇ 6 ರ ಸಂಜೆ 5 ಗಂಟೆಯವರೆಗೆ ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹತೆ ಹೊಂದಿರುವ ಶಿಕ್ಷಕರು ಅಥವಾ ಹೆಸರು ಬಿಟ್ಟು ಹೋಗಿರುವವರು ಆಯಾ ತಾಲ್ಲೂಕು ಕಚೇರಿಗಳಲ್ಲಿ ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳಪಟ್ಟಿ ಪ್ರಕಟವಾಗಿದ್ದು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು, ಮೇ 9 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನಾಮಪತ್ರ ನಮೂನೆ ಪಡೆದುಕೊಂಡು ಮೇ 16 ರೊಳಗೆ ಸಲ್ಲಿಸಬಹುದಾಗಿದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ ಎಂದರು.

ಜೂನ್ 3ರಂದು ಮತದಾನ

ಜೂನ್ 3 ರಂದು ಬೆಳಿಗ್ಗೆ 8 ರಿಂದ 4 ರವರೆಗೆ ಮತದಾನ ನಡೆಯಲಿದ್ದು. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ, ಎಲ್ಲ ಚುನಾವಣೆ ಪ್ರಕ್ರಿಯೆಗಳು ಜೂನ್ 12 ರಂದು ಪೂರ್ಣಗೊಳ್ಳುತ್ತದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ‌ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತದೆ ಎಂದರು.

4,860 ಮತದಾರರು ನೋಂದಣಿ

ಮಂಡ್ಯ ಜಿಲ್ಲೆಯಲ್ಲಿ 8 ಮತಕೇಂದ್ರಗಳಿದ್ದು, ಅಂತಿಮ‌ ಮತದಾರರ ಪಟ್ಟಿಯ ಪ್ರಕಾರ ಈವರೆಗೆ 4860 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಕೊಂಡಿದ್ದು, ಮೇ 6 ರ ಸಂಜೆ 5 ಗಂಟೆಯವರೆಗೆ ನೊಂದಣಿಗೆ ಅವಕಾಶ ನೀಡಲಾಗಿದೆ‌ ಎಂದರು.

ಕೆ ಆರ್ ಪೇಟೆ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 295, ಹೆಣ್ಣು – 132‌ ಒಟ್ಟು 427 ಮತದಾರರು, ನಾಗಮಂಗಲ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 268, ಹೆಣ್ಣು – 132, ಒಟ್ಟು – 400 ಮತದಾರರು, ಪಾಂಡವಪುರ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 228, ಹೆಣ್ಣು – 167, ಒಟ್ಟು – 395 ಮತದಾರರು, ಮಂಡ್ಯ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 534, ಹೆಣ್ಣು – 555, ಒಟ್ಟು – 1089 ಮತದಾರರು, ಮಂಡ್ಯ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧ ಮತ ಕೇಂದ್ರದಲ್ಲಿ ಗಂಡು – 389, ಹೆಣ್ಣು – 291, ಒಟ್ಟು – 680 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆಂದರು.

ಮದ್ದೂರು ಮಿನಿ ವಿಧಾನಸೌಧಮತ ಕೇಂದ್ರದಲ್ಲಿ ಗಂಡು – 502, ಹೆಣ್ಣು – 373, ಒಟ್ಟು – 875 ಮತದಾರರು, ಶ್ರೀರಂಗಪಟ್ಟಣ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 182, ಹೆಣ್ಣು – 201, ಒಟ್ಟು – 383 ಮತದಾರರು, ಮಳವಳ್ಳಿ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಗಂಡು – 419, ಹೆಣ್ಣು – 192, ಒಟ್ಟು – 611 ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆಂದು ತಿಳಿಸಿದರು.

ಸಭೆಯಲ್ಲಿ ಡಿಡಿಪಿಐ ಹೆಚ್ ಶಿವರಾಮೇಗೌಡ, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ವಿವಿಧ ಪಕ್ಷದ ಮುಖಂಡರುಗಳಾದ ನವೀನ್ ಕುಮಾರ್, ಬೊಮ್ಮಯ್ಯ, ಚಿದಂಬರ್, ರಮೇಶ್, ದಿನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!