ತಮ್ಮ ಕುಟುಂಬದವರ ಜೊತೆಗೆ ಬ್ಯಾಂಕಾಕ್ ಪ್ರವಾಸಕ್ಕೆ ತರೆರಳಿದ್ದ ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ ಬ್ಯಾಂಕಾಕ್ ನಲ್ಲಿ ಸ್ಪಂದನಾ ಅವರು ಮಲಗಿದ್ದವರು ಕುಟುಂಬ ಸದಸ್ಯರು ಎಬ್ಬಿಸಲು ಹೋದಾಗ ಎದ್ದಿಲ್ಲ.ಲೋ ಬಿಪಿಯಾಗಿ ಹೃದಯಘಾತವಾಗಿತ್ತು, ಈ ವೇಳೆ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ಪಂದನಾ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸದ್ಯ ಅವರ ಮೃತದೇಹವನ್ನು ಬ್ಯಾಂಕಾಕ್ ಆಸ್ಪತೆಯಲ್ಲಿ ಇಡಲಾಗಿದ್ದು, ಅವರ ತಂದೆ ನಿವೃತ್ತ ಪೋಲಿಸ್ ಅಧಿಕಾರಿ ಬಿ.ಕೆ.ಶಿವರಾಂ ಮತ್ತು ಕುಟುಂಬದ ಇತರ ಸದಸ್ಯರು ಬ್ಯಾಂಕಾಕ್ ಗೆ ತೆರಳಿದ್ದಾರೆ. ಬ್ಯಾಂಕಾಕ್‌ಗೆ ವಿಜಯ್ ರಾಘವೇಂದ್ರ ಶೂಟಿಂಗ್ ಗೆ ತೆರಳಿದ್ದು ನಂತರ ಕುಟುಂಬದದೊಂದಿಗೆ ಸೇರಿಕೊಂಡಿದ್ದರು.
ಇಂದು ಮಧ್ಯಾಹ್ನದ ಹೊತ್ತಿಗೆ ಬ್ಯಾಂಕಾಕ್‌ನಲ್ಲಿ ಸ್ಪಂದನ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.
2007ರ ಆಗಸ್ಟ್ 26 ರಂದು ನಟ ವಿಜಯ ರಾಘವೇಂದ್ರ ಅವರನ್ನು ವಿವಾಹವಾಗಿದ್ದ ಸ್ಪಂದನಾ ಅವರಿಗೆ ಪುತ್ರ ಪುತ್ರಿ ಇದ್ದಾರೆ.
ಸ್ಪಂದನಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು,ಸ್ಪಂದನಾ ಅವರ ಅಗಲಿಕೆ ನೋವು ತಂದಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ, ಬಿ.ಕೆ.ಶಿವರಾಂ ಅವರಿಗೆ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಎಂದು ಟ್ವೀಟ್ ಮೂಲಕ ಸಂತಾಪ ಸಲ್ಲಿಸಿದ್ದಾರೆ.
ಸ್ಪಂದನಾ ನಿಧನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ,ಸಚಿವ ದಿನೇಶ್ ಗುಂಡೂರಾವ್, ಸಾ.ರಾ.ಗೋವಿಂದು ಸೇರಿದಂತೆ ಚಲನಚಿತ್ರರಂಗದ ನಟ,ನಟಿಯರು ಸಂತಾಪ ಸಲ್ಲಿಸಿದ್ದಾರೆ.




