Sunday, November 22, 2026

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಜಾಗೃತಿ ಸಮಾವೇಶ | ಎಸ್ಸಿ, ಎಸ್ಟಿ ಕಲ್ಯಾಣಕ್ಕೆ ವಿಶೇಷ ಅನುದಾನ ನೀಡಲು ಆಗ್ರಹ

ರಾಜ್ಯದ ಪರಿಶಿಷ್ಟ ಜಾತಿ/ಪಂಗಡಗಳ ಪ್ರತಿ ಕುಟುಂಬಕ್ಕೆ 25 ಲಕ್ಷ ವಿಶೇಷ ಅನುದಾನ(ತೆಲಂಗಾಣ ರಾಜ್ಯದಂತೆ)ವನ್ನು ಪ್ರಸ್ತುತ 2026-27ನೇ ಸಾಲಿನ “ಬಜೆಟ್ ನಲ್ಲಿ ಘೋಷಿಸಿ, ಈ ಜನವರ್ಗಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಡ್ಯದಲ್ಲಿ ಸಂವಿಧಾನ ಜಾಗೃತಿ ಸಮಾವೇಶ ನಡೆಸಿ ಮಂಡ್ಯ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ದಸಂಸ ಕಾರ್ಯಕರ್ತರು, ರಾಜ್ಯ ಪರಿಶಿಷ್ಟ ಜಾತಿ/ಪಂಗಡಗಳ ಉಪಯೋಜನೆ ಕಾಯ್ದೆ(2013)ಯನ್ನು ತಮ್ಮ ನೇತೃತ್ವದ ಕಾಂಗ್ರೇಸ್ ಸರ್ಕಾರ ಜಾರಿ ಮಾಡಿದ್ದರೂ. ಈ ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಕಾಯ್ದೆಯ ಕಲಂ7(ಸಿ(ಡಿ)ಗಳನ್ನು ಸೇರಿಸಿ, ಕಳೆದ ಹತ್ತು ವರ್ಷದಿಂದ ನಯವಾಗಿ ವಂಚಿಸಿದ ಕಾರಣಕ್ಕಾಗಿ ಕಲಂ 7(ಸಿ)ಯನ್ನು ಸದನದಲ್ಲಿ ಮಂಡಿಸಿ ಕೈಬಿಡಬೇಕೆಂದು ಆಗ್ರಹಿಸಿದರು.

ಅಂತರ ಜಾತಿ ವಿವಾಹ ಪ್ರಕರಣಗಳಲ್ಲಿ ಕರ್ನಾಟಕ”ಮರ್ಯಾದೆ ಹತ್ಯೆ” ನಿಷೇಧ ಕಾಯ್ದೆ ಜಾರಿ ಮಾಡಬೇಕು. ರಾಜ್ಯ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶೇ75 ಮೀಸಲಾತಿ ನೀತಿ (ತಮಿಳುನಾಡು ಸರ್ಕಾರದಂತೆ )ಯನ್ನು ಜಾರಿಗೊಳಿಸಿ, ಸಂವಿಧಾನದ ಸೆಡ್ಯೂಲ್9 ರಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ಕೂಡಲೆ ಶಿಫಾರಸ್ಸು ಸಲ್ಲಿಸಬೇಕು.  ರಾಜ್ಯದ ಸರ್ವರಿಗೂ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು. ರಾಜ್ಯ ಸರ್ಕಾರಿ ಸೇವಾ ಸಂಸ್ಥೆ ಮತ್ತು ಕೈಗಾರಿಕೆಗಳನ್ನು ಖಾಸಗೀರಿಸುವುದನ್ನು ಈ ಕೂಡಲೆ ನಿಲ್ಲಿಸಬೇಕು ಖಾಸಗಿ ಕ್ಷೇತ್ರದಲ್ಲೂ “ಮೀಸಲಾತಿ ನೀತಿ” ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ರಾಜ್ಯದ ಸರ್ಕಾರಿ ಭೂಮಿಯ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸುವಾಗ, ಭೂ ಮಂಜೂರಾತಿ ಕಾಯ್ದೆ ಮತ್ತು ನಿಯಮ(1969) ದನ್ವಯ ಪರಿಶಿಷ್ಟರಿಗೆ ಶೇ50 ರಷ್ಟು ಭೂ ಮಂಜೂರಾತಿ ಮಾಡಲು ಕಂದಾಯ ಇಲಾಖೆಗೆ ನಿರ್ಧೇಶಿಸಬೇಕು. ರಾಜ್ಯದಲ್ಲಿನ ನಿವೇಶನ ಮತ್ತು ವಸತಿ ರಹಿತ ಕೃಷಿ ಕೂಲಿ ಕಾರ್ಮಿಕರಿಗೆ ಈ ಕೂಡಲೆ ಸೂರು ನೀಡಬೇಕು. ಈ ಕುಟುಂಭಗಳಿಗೆ ತಲಾ 2.00 ಎಕರೆ ಕೃಷಿ ಭೂಮಿ ನೀಡುವ “ನಮ್ಮ ಭೂಮಿ-ನಮ್ಮಹಕ್ಕು” ಕಾಯ್ದೆ ಜಾರಿಮಾಡಬೇಕು. ರಾಜ್ಯದ ರೈತರ ಕೃಷಿ ಉತ್ಪನ್ನಗಳಿಗೆ ಡಾಸ್ವಾಮಿನಾಥನ್ ಆಯೋಗದ ಸಿಫಾರಸ್ಸಿನಂತೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಘೋಷಿಸಬೇಕು. ರಾಜ್ಯದ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ