Friday, September 20, 2024

ಪ್ರಾಯೋಗಿಕ ಆವೃತ್ತಿ

ಆಧ್ಯಾತ್ಮಿಕ ಚಿಂತನೆಯಿಂದ ಸಮೃದ್ಧಿ ಜೀವನ ಸಾಧ್ಯ: ಸೌಮ್ಯನಾಥಶ್ರೀ

ಆಧ್ಯಾತ್ಮಿಕ ಚಿಂತನೆಯಿಂದ ಪ್ರತಿಯೊಬ್ಬ ಮನುಷ್ಯನು ಸುಖ, ಶಾಂತಿ ಮತ್ತು ಸಮೃದ್ಧಿ ಜೀವನ ನಡೆಸಲು ಸಾಧ್ಯ ಎಂದು ಬೆಂಗಳೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಕಾರ್ಯದರ್ಶಿ ಶ್ರೀಸೌಮ್ಯನಾಥ ಸ್ವಾಮೀಜಿ ತಿಳಿಸಿದರು.

ಮಳವಳ್ಳಿ ತಾಲೂಕಿನ ಚೋಟನಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ಜೀರ್ಣೋದ್ಧಾರಗೊಂಡಿರುವ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಭೂಮಿಯ ಮೇಲೆ ಮನುಷ್ಯನ ಬದುಕು ಕ್ಷ ಣಿಕ ಮಾತ್ರ. ಸಮಾಜದಲ್ಲಿ ಪುಣ್ಯ ಕಾರ್ಯ ಮಾಡಿದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕ ಆಗುತ್ತದೆ. ಮನುಷ್ಯನ ಉತ್ತಮ ಕಾರ್ಯಕ್ಕೆ ಸಮಾಜದಲ್ಲಿ ಉತ್ತಮ ಬೆಲೆಯಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಮುದಾಯಕ್ಕೆ ಒಂದು ದೇವಾಲಯ ನಿರ್ಮಾಣ ಆಗುತ್ತಿದೆ. ಇಂತಹ ಮನುಷ್ಯನ ಮನಸ್ಥಿತಿ ಬದಲಾಗಿ ಸಾಮೂಹಿಕ ದೇವಾಲಯ ನಿರ್ಮಾಣ ಆಗಬೇಕು ಎಂದು ಹೇಳಿದರು.

ದೇವಸ್ಥಾನದ ಸಂಪ್ರೋಕ್ಷಣೆ ಮಹೋತ್ಸವ ಅಂಗವಾಗಿ ಗಂಗೆ ಪೂಜೆ, ಗೋ ಪೂಜೆ, ವಾಸ್ತು ಪುಣ್ಯಾಯ, ಹೋಮ, ದೇವಿಗೆ ಕುಂಭಾಭಿಷೇಕವನ್ನು ನೆರವೇರಿಸಿದರು. ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ ಅನ್ನಸಂತರ್ಪಣೆ ನಡೆಯಿತು.ಪೂಜಾ ಕೈಂಕರ್ಯಗಳನ್ನು ನಡೆಯಿತು.

ಚನ್ನ ಬಸವ ಸ್ವಾಮೀಜಿ, ಚೊಟ್ಟನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ವಾಮಿ, ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇರಸು, ರಮೇಶ, ರಾಜು, ನಾಡಗೌಡ, ಪುಟ್ಟಸ್ವಾಮಿ, ಕೆಂಪೇಗೌಡ, ಮರೀಗೌಡ ಸಿದ್ದೇಗೌಡ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!