Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ರೀಡಾ ಶಾಲೆ – ನಿಲಯಕ್ಕೆ ಜಿಲ್ಲೆಯ ವಿವಿಧೆಡೆ ಅಭ್ಯರ್ಥಿಗಳ ಆಯ್ಕೆ

ರಾಜ್ಯ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಕ್ಕೆ 2023-24ನೇ ಸಾಲಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿರುವ ಜಿಲ್ಲಾ ಕ್ರೀಡಾ ಶಾಲೆ, ಕ್ರೀಡಾ ನಿಲಯದ 8ನೇ ತರಗತಿಗೆ ಪ್ರವೇಶ ನೀಡಲು ಪ್ರತಿ ತಾಲೂಕಿನಿಂದ ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಆಯ್ಕೆಯಾದ ಬಾಲಕ, ಬಾಲಕಿಯರು 2023-24ನೇ ಸಾಲಿನಲ್ಲಿ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ ತರಗತಿಗಳಿಗೆ ಮಾತ್ರ ಪ್ರವೇಶ ಪಡೆಯಲು ಅರ್ಹರಿರಬೇಕು.

ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯು ಜನವರಿ 12 ರಂದು ಮಳವಳ್ಳಿಯ ತಾಲ್ಲೂಕು ಕ್ರೀಡಾಂಗಣ, ಜನವರಿ 13 ರಂದು ಮದ್ದೂರು ತಾಲ್ಲೂಕು ಕ್ರೀಡಾಂಗಣ, ಜನವರಿ 16 ರಂದು ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣ, ಜನವರಿ 17 ರಂದು ಪಾಂಡವಪುರ ತಾಲ್ಲೂಕು ಕ್ರೀಡಾಂಗಣ, ಜನವರಿ 18 ರಂದು ನಾಗಮಂಗಲ ತಾಲ್ಲೂಕು ಕ್ರೀಡಾಂಗಣ, ಜನವರಿ 19 ರಂದು ಕೆ.ಆರ್ ಪೇಟೆಯ ತಾಲ್ಲೂಕು ಕ್ರೀಡಾಂಗಣ, ಜನವರಿ 20 ಮತ್ತು 21 ರಂದು ಮಂಡ್ಯ ತಾಲ್ಲೂಕು ಕ್ರೀಡಾಗಣದಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಪುಟ್‍ಬಾಲ್ ತರಬೇತುದಾರ ಬಾಬು ಗುರುರಾಜ್ ಜಿ.ಬಿ ಮೊ.ನಂ:7892902301, ಬಾಸ್ಕೆಟ್ ಬಾಲ್ ತರಬೇತುದಾರ ಭರತ್ ರಾಜ್ ಸಿ.ಬಿ ಮೊ.9916644007, ಅಥ್ಲೆಟಿಕ್ಸ್ ತರಬೇತುದಾರ ದೈವಸಿ ಗಾಮಣಿ ಮೊ.7502126870 ಮತ್ತು ಕಬ್ಬಡಿ ತರಬೇತುದಾರರಾದ ರೂಪಶ್ರೀ  ಮೊ.7353097540 ಅವರನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!