Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕ್ರೀಡಾ ಸಾಧಕಿ ಮಾನ್ಯಗೆ ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’

ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ”ಅಕ್ಷರದವ್ವ ಸಾವಿತ್ರಿಬಾಯಿ ಪುಲೆ- 2024ರ ವಾರ್ಷಿಕ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಕ್ರೀಡಾ ಸಾಧಕಿ ಗುಡಿಗೇನಹಳ್ಳಿ ಗ್ರಾಮದ ಮಾನ್ಯ ಜಿ.ಎಸ್ ಆಯ್ಕೆಯಾಗಿದ್ದಾರೆ.

ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನವಾದ ಜನವರಿ 3ರಂದು ವಿಜಯಪುರದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮಂಡ್ಯ ಜಿಲ್ಲೆಯ ಗುಡಿಗೇನಹಳ್ಳಿ ಗ್ರಾಮದ ಕೃಷಿಕ ಸ್ವಾಮಿ ಜಿ.ಎಸ್‌ ಎಂಬುವರ ಮಗಳಾದ ಮಾನ್ಯ ಅವರು 5ನೇ ತರಗತಿಯಿಂದಲೇ ಕ್ರೀಡಾಪಟುವಾಗಿ ತೊಡಿಸಿಕೊಂಡು, 2 ಬಾರಿ ತಾಲ್ಲೂಕು ಮಟ್ಟ, 3 ಬಾರಿ ಜಿಲ್ಲಾ ಮಟ್ಟ, 2 ಬಾರಿ ವಿಭಾಗ ಮಟ್ಟ, 1 ಬಾರಿ ಖೇಲೋ ಇಂಡಿಯಾ, 1 ಬಾರಿ ಮಿನಿ ಒಲಂಪಿಕ್, 2 ಬಾರಿ ದಸರಾ ಕ್ರೀಡಾ ಕೂಟ, 4 ಬಾರಿ ರಾಜ್ಯ ಮಟ್ಟ, 2 ಬಾರಿ ರಾಷ್ಟ್ರೀಯ ಮಟ್ಟ, 1 ಬಾರಿ ಅಂತ‌ರ್ ರಾಷ್ಟ್ರೀಯ ಮಟ್ಟದ “ಹ್ಯಾಂಡ್ ಬಾಲ್” ಮತ್ತು “ಬಾಸ್ಕೆಟ್ ಬಾಲ್” ಕ್ರೀಡೆ ಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಪುರಸ್ಕಾರ ಪಡೆದಿದ್ದಾರೆ.

ಮುಂದಿನ ಒಲಂಪಿಕ್ ಮತ್ತು ಕಾಮನ್ ವೆಲ್ತ್ ಮಟ್ಟದಲ್ಲಿ ಭಾಗವಹಿಸಲು ಕಠಿಣ ತರಬೇತಿ ಪಡೆಯುತ್ತಿದ್ದು ಪ್ರಸ್ತುತ ಮಂಡ್ಯ ನಗರದ ಪಿಇಎಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಕ್ರೀಡಾ ಕ್ಷೇತ್ರದ ಸಾಧನೆ ಗುರುತಿಸಿ ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!