ಎಲ್ಲಾ ಕ್ಷೇತ್ರಗಳಿಗೂ ಮಾನವ ಸಂಪನ್ಮೂಲ ಸೇವೆ ಅತ್ಯವಶ್ಯಕವಿದೆ ಎಂದು ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಗಾಂಧಿನಗರದಲ್ಲಿ ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘದ ರಾಜ್ಯ ಮಟ್ಟದ ನೂತನ ಕಚೇರಿಯ ಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವ ಸಂಪನ್ಮೂಲ ಸೇವೆ ಅನಗತ್ಯ ಅನ್ನುವ ಕಡೆಗೆಲ್ಲ ಉತ್ತಮ ಸೇವೆ ನೀಡುತ್ತ ಬರುತ್ತಿದೆ, ಮಾನವ ಸಂಪನ್ಮೂಲ ಪೂರೈಕೆ ಮಾಡಿ ಸಂಸ್ಥೆಗಳು ಉತ್ತಮವಾಗಿ ನಡೆಯುವುದಕ್ಕೆ ನೀವು ಕಾರಣರಾಗುತ್ತಿದ್ದೀರಿ,ಉದ್ಯೋಗ ಸೃಷ್ಟಿ ಸುವ ನಿಮ್ಮ ಸೇವೆ ಕೊಡುಗೆ ಅನನ್ಯ ಎಂದು ನುಡಿದರು.
ನಮ್ಮ ದೇಶ ಮತ್ತು ರಾಜ್ಯದ ಆರ್ಥಿಕ ಪ್ರಗತಿಗೆ ಮಹತ್ವವಾದ ಸೇವೆ ನೀಡುತ್ತಿದ್ದೀರಿ, ಮಾನಮೀಯ ಮೌಲ್ಯವನ್ನು ಹೆಚ್ಚಿಸಿ, ಮಾನವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೀರಿ, ಸಾಕಷ್ಟು ಜನರಿಗೆ ಉದ್ಯೋಗ ಕೊಡುತ್ತಿತ್ತಿದ್ದೀರಿ, ಬಹಳಷ್ಟು ಸಂಸಾರ ಸಾಗಿಸುದಕ್ಕೆ ನೆರವಾಗುತ್ತಿದ್ದೀರಿ, ಅವರ ಮಕ್ಕಳ ವಿದ್ಯಾಬ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸೇವಾವಲಯ ಮತ್ತು ಸೇವಾ ಕ್ಷೇತ್ರ ಅತ್ಯಂತ ಮಹತ್ವದ್ದಾಗಿದೆ, ಆ ನಿಟ್ಟಿನಲ್ಲಿ ಸೇವಾ ಕಾರ್ಯವು ಎಲ್ಲರ ಪ್ರೀತಿ ಪಾತ್ರಗಳಿಗೆ ಮೆಚ್ಚುಗೆಯಾಗುವಂತೆ ನಡೆದುಕೊಳ್ಳಿ, ಸಂಘ ಸಂಸ್ಥೆ ಬೆಳೆವಣಿಗೆಗೆ ಆಧಾರವಾಗಿರಿ ಎಂದು ಶುಭನುಡಿದರು. ಸಂಘದ ಕಚೇರಿಗೆ ಸ್ವಂತ ಕಟ್ಟಡ ಮಾಡುವಂತೆ ಸಲಹೆ ನೀಡಿದರು
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ದೇಶದಲ್ಲಿ ಮಾನವ ಸಂಪನ್ಮೂಲ ಸೇವೆ ದೊಡ್ಡದಾಗುತ್ತಿದೆ, ಸೇವಾ ಕ್ಷೇತ್ರ, ಔಧ್ಯೋಗಿಕ ಕ್ಷೇತ್ರ, ಬ್ಯಾಂಕಿಂಕ್, ಹೋಟೇಲ್ಸ್ ಇಂತಹ ಉದ್ಯಮಗಳು ಬೆಳೆಯುತ್ತಿವೆ, ಶಾಲಾ-ಕಾಲೇಜು, ಆಸ್ಪತ್ರೆಗಳು, ವಿವಿಧ ಕ್ಷೇತ್ರಗಳ ಬೆಳವಣಿಗೆಗಳಿಗೆ ಮಾನವ ಸಂಪನ್ಮೂಲ ಅತ್ಯಮುಲ್ಯ ಎಂದರು.
ಈ ಮಾನವಸಂಪನ್ಮೂಲ ಒಂದಾಣಿಕೆ ಸರಿಯಾಗಿದ್ದರೆ ಎಲ್ಲವೂ ಚನ್ನಾಗಿರುತ್ತವೆ, ವ್ಯವಾರ ವೈಹಿವಾಟು ಚನ್ನಾಗಿರುತ್ತದೆ, ಇಂದು ಮಾನವ ಸಂಪನ್ಮೂಲ ಪೂರೈಕೆ ಗುತ್ತಿಗೆದಾರರ ಸಂಘ ವಿಶೇಷವಾಗಿ ನಗರದ ಹೃದಯ ಭಾಗ ಗಾಂಧಿನಗರದಲ್ಲಿ ಪ್ರಾರಂಭವಾಗುತ್ತಿದೆ ಎಂದು ಹೇಳಿದರು.
ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀ ಮಟ್ಟದಲ್ಲಿ ಮಾನವ ಸಂಪನ್ಮೂಲ ಸೇವೆಗೆ ಪೂರೈಕೆ ಮಾಡುವ ರಾಜ್ಯಮಟ್ಟದ ಕಚೇರಿ ಇಂದು ತೆರೆದುಕೊಳ್ಳುತ್ತಿದೆ, ಎಲ್ಲರೂ ಒಗ್ಗಟಾಗಿರಬೇಕು, ಇಂತಹ ಕ್ಷೇತ್ರಗಳ ಅಭಿವೃದ್ದಿ ಪಡಿಸುವುದಕ್ಕೆ ಎಲ್ಲಾ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಎಫ್ ಕೆ ಸಿ ಸಿ ಅಧ್ಯಕ್ಷ ಬಾಲಕೃಷ್ಣ, ಸಂಘದ ರಾಜ್ಯಾಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ, ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರೆಡ್ಡಿ, , ಜಂಟಿ ಕಾರ್ಯದರ್ಶಿ ದಯಾನಂದ್, ಎಲ್ಲಪ್ಪ ಬಿ ಕಂದಕೂರ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಗೋಪಾಲ್ ,ಗಣಪತಿ ಹೂಟಗಾರ್, ರಾಜಪ್ಪ ಮತ್ತಿತರರಿದ್ದರು.




