Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ನಾಡಪ್ರಭು ಕೆಂಪೇಗೌಡ ಜಯಂತಿ ಅಚರಣೆಗೆ ನಿರ್ಧಾರ

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ಆದೇಶದ ಪ್ರಕಾರ ಇದೇ ಜೂ.27ರಂದು ವಿಜೃಂಭಣೆಯಿಂದ ಆಚರಿಸಬೇಕಾಗಿದ್ದು, ಇದಕ್ಕೆ ಸಂಘ ಸಂಸ್ಥೆಗಳ ಸಹಕಾರ ನೀಡಬೇಕೆಂದು ಮದ್ದೂರು ಉಪ ತಹಶಿಲ್ದಾರ್ ಸೊಮಶೇಖರ್ ಮನವಿ ಮಾಡಿದರು.

ಮದ್ದೂರು ತಾಲ್ಲೂಕು ಆಡಳಿತ ಇಂದು ಕರೆಯಲಾಗಿದ್ದ ಕೆಂಪೇಗೌಡ ಜಯಂತಿ ಆಚರಣೆ ಪೂರ್ವಸಿದ್ದತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿವರ್ಷದಂತೆ ಶ್ರೀನರಸಿಂಹ ಸ್ವಾಮಿ ದೇವಸ್ಥಾನದಿಂದ ಬೆಳಿಗ್ಗೆ ಎಂಟುವರೆಗೆ ಸ್ಥಭ್ಧಚಿತ್ರ ಬೆಳ್ಳಿರಥ ಸೇರಿ ಕಲಾತಂಡಗಳು ಹಾಗು ಶಾಲಾಮಕ್ಕಳು ನಾಗರೀಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನಪ್ರತಿನಿಧಿಗಳೊಟ್ಟಿಗೆ ಮೆರವಣಿಗೆ ಹೊರಟು ಪೇಟೆ ಬೀದಿ ಮೂಲಕ ಪಟ್ಟಣದ ಕ್ರೀಡಾಂಗಣ ದಲ್ಲಿ ವೇದಿಕೆ ಕಾರ್ಯಕ್ರಮ ಸಾಧಕರಿಗೆ ಸನ್ಮಾನ ಹಾಗು ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆ ಪುರಸಭೆ ಹಾಗು ತಾ ಪಂ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯಕ್ರಮದ ಸಹಭಾಗಿಗಳಾಗಿ ಕಾರ್ಯಕ್ರಮ ಅಚ್ಚು ಕಟ್ಟಾಗಿ ನಡೆಯಲು ಸಹಕರಿಸಬೇಕೆಂದು ಉಪತಹಶಿಲ್ದಾರ್ ಸೊಮಶೇಖರ್ ಸೂಚಿಸಿದರು

ಅಖಿಲಕರ್ನಾಟಕ ಒಕ್ಕಲಿಗರ ಸಂಘ ಈ ವರ್ಷವು ಸಹ ಕಾರ್ಯ ಕ್ರಮದ ಮೆರಗು ಹೆಚ್ಚಿಸಲು ಹೆಚ್ಚುವರಿ ತಂಡ ಒದಗಿಸಿಕೊಡುವುದಾಗಿ ಅಧ್ಯಕ್ಷ ಶಿವಲಿಂಗೇಗೌಡ ಚಂದೂಪುರ ಅವರು ಸಭೆಗೆ ತಿಳಿಸಿದರು

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಕಾರ್ಯಧ್ಯಕ್ಷ ನ.ಲಿ.ಕೃಷ್ಣ, ಹೂತಗೆರೆ ಜನಾರ್ದನ, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್,
ವೆಂಕಟ ಚಲುವಯ್ಯ, ಮಹದೇವ್, ನಾಡಪ್ರಭು ಕೆಂಪೇಗೌಡ ಸಂಘದ ಸುರೇಶ್, ಅಶೋಕ್, ಆತಗೂರು ನಿಂಗಯ್ಯ, ರಾಚಪ್ಪಾಜಿ, ಆನಂದಚಾರ್, ಬಸವಚಾರ್, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವಿಷಯ ನಿರ್ವಾಹಕ ನವೀನ್ ಸಭೆಯಲ್ಲಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ