Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀನಗರ | 70 ಕೋಟಿ ಮೌಲ್ಯದ 11 ಕೆಜಿ ಹೆರಾಯಿನ್‌ ವಶ

ಗುರುವಾರ ಶ್ರೀನಗರದಲ್ಲಿ ಇಬ್ಬರು ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದ್ದು, ಅವರಿಂದ 70 ಕೋಟಿ ರೂಪಾಯಿ ಮೌಲ್ಯದ 11 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳಸಾಗಾಣಿಕೆದಾರರಿಂದ 11 ಲಕ್ಷ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

“>

ಎರಡು ಗಡಿಯಾಚೆಗಿನ ನಾರ್ಕೋ ಸ್ಮಗ್ಲರ್‌ಗಳಾದ ಸಜ್ಜದ್ ಬದನಾ ಮತ್ತು ಕರ್ನಾಹ್ ಕುಪ್ವಾರದ ಜಹೀರ್ ಟಂಚ್ ರನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. 11.089 ಕೆಜಿ ಹೆರಾಯಿನ್ (ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 70 ಕೋಟಿ ರೂ. ಮೌಲ್ಯ) ಮತ್ತು 11,82,500 ನಗದನ್ನು ವಶಪಡಿಸಿಕೊಂಡಿದ್ದಾರೆ  ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ )  ವಿಜಯ್ ಕುಮಾರ್, ಹೇಳಿದರು.

ರಾಜ್‌ಬಾಗ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಡ್ರಗ್ಸ್ ಪಾಕಿಸ್ತಾನದಿಂದ ಬಂದಿತ್ತು ಎಂದು ಎಡಿಜಿಪಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!