ಹೆತ್ತರವನ್ನು ಸಾಧಕ ಮಕ್ಕಳ ಹೆಸರಿಂದ ಸಮಾಜ ಗುರುತಿಸುವುದು ಹೆತ್ತವರಿಗೆ ಸಂದ ಗೌರವ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಮಂಡ್ಯ ತಾಲೂಕಿನ ಮಂಗಲ ಗ್ರಾಮದ ರಾಜ್ಯ ಯುವ ಪ್ರಶಸ್ತಿಯ ಪುರಸ್ಕೃತ ಎಂ.ಸಿ.ಲಂಕೇಶ್ ಅವರ ತಾಯಿ ಮಹದೇವಮ್ಮ ಅವರ ಸ್ಮರಣಾರ್ಥ ಅಂಗವಾಗಿ ನೆಲದನಿ ಬಳ ಮಂಗಲ ಮತ್ತು ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷಿನಲ್ ಜಿಲ್ಲೆ ಮಂಡ್ಯ ಆಯೋಜಿಸಿದ್ದ ರಕ್ತದಾನ ಅಭಿಮಾನ ಮತ್ತು ಆರ್ಥಿಕಾಭಿವೃದ್ದಿ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಗಲ ಗ್ರಾಮವು ಸಾಕಷ್ಟು ಸಾಧಕರು ಮತ್ತು ಸುಧಾರಕರನ್ನು ನಾಡಿಗೆ ಕೊಟ್ಟಿದೆ, ಸೇವಾ ಕಾರ್ಯಗಳ ಮೂಲಕ ಗ್ರಾಮಕ್ಕೆ ದೊಡ್ಡ ಕೀರ್ತಿ, ಹೆಸರರನ್ನು ತಂದುಕೊಟ್ಟಿದ್ದಾರೆ, ತಂದೆ-ತಾಯಿಯ ಹೆಸರಿನಿಂದ ಮಕ್ಕಳನ್ನು ಸಮಾಜ ಗುರುತಿಸುವುದು ಸಹಜ, ಆದರೆ ಸಾಧನೆ ಮಾಡುವ ಮಕ್ಳಳ ಹೆಸರಿಂದ ತಂದೆ-ತಾಯಿ-ಗ್ರಾಮವನ್ನು ಗುರುತಿಸುವುದು ಶ್ಲಾಘನೀಯ ಎಂದು ನುಡಿದರು.

ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ, ಪರಿಸರ ಸಂಸ್ಥೆಯ ಯೋಗೇಶ್, ರಕ್ತದಾನಿ, ನೆಲದನಿ ಬಳದ ಅಧ್ಯಕ್ಷ ಲಂಕೇಶ್ ಮತ್ತು ತಂಡ ಇಂತವರು ಸಮಾಜ ಸುಧಾರಕಾಗಿ, ಮಾರ್ಗದರ್ಶಕರಾಗಿ ಕೀರ್ತಿವಂತರಾಗುತ್ತಾರೆ, ಸಮಾಜ ಸದಾ ಗೌರವಿಸುತ್ತದೆ ಎಂದರು.
ಲಂಕೇಶ್ ತಮ್ಮ ಮದುವೆ ದಿನ, ಜನ್ಮದಿನಗಳಲ್ಲಿ ರಕ್ತದಾನ- ಸಸ್ಯದಾನ ಸೇರಿದಂತೆ ಸಾರ್ಥಕವಾಗುವಂತಹ ವಿಬಿನ್ನ ಸೇವಾಕಾರ್ಯಕ್ರಮಗಳೊಂದಿಗೆ ಸಮಾಜಮುಖಿಯಾಗಿ ನಿಲ್ಲುತ್ತಾರೆ, ತಮ್ಮ ತಾಯಿಯ ಆರೋಗ್ಯ ರಕ್ಷಣೆಗಾಗಿ ಬಹಾಳ ಪ್ರಯತ್ನ ಪಟ್ಟರು, ನಾವು ಕೂಡ ಆರೋಗ್ಯ ವಿಚಾರಿಸಿ ಧೈರ್ಯಹೇಳಿದ್ದೆ ಎಂದು ತಿಳಿಸಿದರು.
ತಾಯಿಯ ಅಗಲಿಕೆಯಿಂದ ದೃತಿಗೆಡಬಾರದು, ಸಮಾಜ ತಾಯಿಯಿದ್ದ ಹಾಗೆ, ಸಮಾಜ ನಿಮ್ಮನ್ನು ಅಪ್ಪಿಕೊಳ್ಳುತ್ತದೆ, ನಿಮ್ಮ ಸೇವಾಕಾರ್ಯಗಳು ಜನಮನ್ನಣೆಪಡೆದಿವೆ, ರಕ್ತದಾನ, ನಾಟಕ, ಸಾಂಸ್ಕೃತಿಕ, ಪರಸರ, ವೈಚಾರಿಕ ಪ್ರಜ್ಞೆ, ಕುವೆಂಪು ಪ್ರಜ್ಞೆ ಸೇರಿದಂತೆ ಹತ್ತು ಹಲವು ಕಾರ್ಯಗಳು ನಮ್ಮನ್ನು ಬೆಳೆಸುತ್ತಿವೆ ಎಂದು ಹೇಳಿದರು.
ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಇಂದು ೧೧ನೇ ದಿನ ಪುಣ್ಯಕಾರ್ಯ ನಡೆಯುತ್ತಿದೆ, ಈ ದಿನದಲ್ಲಿ ರಕ್ತದಾನ, ಸಸ್ಯದಾನ ಮೂಲಕ ಮಾದರಿ ತಿಥಿಕಾರ್ಯ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಲಂಕೇಶ್ 73ನೇ ಬಾರಿ ರಕ್ತದಾನ ಮಾಡಿದ್ದು, ತಮ್ಮ ತಾಯಿಯ ಪುಣ್ಯಕಾರ್ಯದಲ್ಲಿಯೂ ರಕ್ತದಾನ ಮಾಡಿರುವುದು ಉತ್ತಮ ಕಾರ್ಯಕ್ರಮವಾಗಿದೆ, ನಾವೇಲ್ಲರೂ ಅವರಿಗೆ ಅಭಾರಿಯಾಗಿರಬೇಕಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಇದೆ, ಸಸ್ಯ ಸಂಪತ್ತು ಹೆಚ್ಚಬೇಕಿದೆ, ಇಂತಹ ಸ್ಮರಣೆ ಕಾರ್ಯಕ್ರಮಗಳು, ಜನ್ಮದಿನ ಕಾರ್ಯಕ್ರಮಗಳಲ್ಲಿ ಸೇವಾಚಟುವಟಿಕೆಗಳ ಮೂಲಕ ಪ್ರಕೃತಿಗೆ ಪೂರಕವಾಗಿರುವುದು ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು 25ಕ್ಕೂ ಹೆಚ್ಚು ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಿದರು. ಸಸಿಗಳನ್ನು ಗಣ್ಯರು ವಿತರಿಸಿದರು. ಗಾಯಕ ಶಿವಾರ ಉಮೇಶ್ ಮತ್ತು ತಂಡದವರು ಗೀತನಮನ ನಡೆಯಿತು.
ಕಾರ್ಯಕ್ರಮದಲ್ಲಿ ಇಂಜಿನಿಯರ್ ಕೆಂಪರಾಜು, ಅಧಿಕಾರಿ ಕೋಮಲ್‌ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನೆಲದನಿ ಬಳದ ಗೌರವಾಧ್ಯಕ್ಷೆ ರುಕ್ಮಿಣಿ ಶಂಕರೇಗೌಡ, ಪದಾಧಿಕಾರಿಗಳಾದ ಕುಮಾರ್‌ಗೌಡ, ಮಹದೇವು, ವಕೀಲ ಶ್ರೀನಿವಾಸ್, ಪ್ರತಾಪ್, ನಂಜುಂಡ, ಕೀಲಾರಸುರೇಶ್, ಗ್ರಾಮದ ಮುಖಂಡರು ಹಾಜರಿದ್ದರು.




