Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೆ.ವಿ.ಶಂಕರಗೌಡ ಅಧ್ಯಯನ ಪೀಠ ಉದ್ಘಾಟನೆ – ಲಲಿತಕಲಾ ಪ್ರಶಸ್ತಿ ಪ್ರದಾನ

ಕೆ.ವಿ. ಶಂಕರಗೌಡ ಅಧ್ಯಯನ ಪೀಠ ಉದ್ಘಾಟನೆ ಮತ್ತು ಲಲಿತಕಲಾ ಪ್ರಶಸ್ತಿ ಪ್ರದಾನ ಸಮಾರಂಭವು ಮಂಡ್ಯದ ಪಿಇಎಸ್ ವಿಜ್ಞಾನ ಕಾಲೇಜು ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜುಲೈ 27ರಂದು ನಡೆಯಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಉದ್ಘಾಟಿಸಲಿದ್ದು, ಶಾಸಕ ರವಿಕುಮಾರ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅಧ್ಯಯನ ಪೀಠ ಹಾಗೂ ಕಾರ್ಯಕ್ರಮಗಳ ಕುರಿತು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಲಿದ್ದು, ಖ್ಯಾತ ವಿದ್ವಾಂಸ ಡಾ. ರಾಘವ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಹುದ್ದೆ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಜಾಹೀರಾತು

ಕೆ.ವಿ.ಶಂಕರಗೌಡ ಲಲಿತಕಲಾ ಪ್ರಶಸ್ತಿ ಪ್ರದಾನವನ್ನು ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಮಾಡಲಿದ್ದು, ಮಾಜಿ ಶಾಸಕ ಎಂ. ಶ್ರೀನಿವಾಸ್, ಬಿ. ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಭಾಗವಹಿಸಲಿದ್ದಾರೆ. ಐಆರ್ ಎಸ್ ಅಧಿಕಾರಿ ಜಯರಾಮ್ ರಾಯಪುರ ರಂಗಭೂಮಿಯ ಪರಿಣಿತರಿಗೆ ಸನ್ಮಾನ ಮಾಡಲಿದ್ದಾರೆ. ನಾಟಕಕಾರ ಪ್ರೊ ರಾಜಪ್ಪ ದಳವಾಯಿ, ರಂಗಭೂಮಿ ನಿರ್ದೇಶಕರಾದ ಪ್ರಭು ಶಿಗ್ಗಾಂವ್, ಅಜಯ್ ನೀನಾಸಂ ಹಾಗೂ ಹೆಸರಾಂತ ಚಿತ್ರ ಕಲಾವಿದ ಮಾರ್ಕಾಲು ದೇವರಾಜು ಅವರಿಗೆ ಲಲಿತಕಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿದರು.

ನಾಟಕೋತ್ಸವ
ಜುಲೈ 27 ರಿಂದ ಆಗಸ್ಟ್ 1 ರವರೆಗೆ ಪ್ರತಿದಿನ 6.30 ಗಂಟೆಗೆ ಸ್ವಾಮಿ ವಿವೇಕಾನಂದ ರಂಗ ಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ.

ಜುಲೈ 27-28ರಂದು ಪ್ರೊ. ರಾಜಪ್ಪ ದಳವಾಯಿ ನಿರ್ದೇಶನದ ಕೆ.ವಿ. ಶಂಕರಗೌಡ ಜೀವನಧಾರಿತ ನಿತ್ಯ ಸಚಿವ ನಾಟಕ ಪ್ರದರ್ಶನ ನಡೆಯಲಿದೆ. 29ರಂದು ರಾಜಸೂಯಯಾಗ ಅಥವಾ ಜರಾಸಂಧ ವಧೆ ಮೂಡಲಪಾಯ ಯಕ್ಷಗಾನ ಪ್ರಸಂಗ, 30ರಂದು ಕರಿಭಂಟನಟನ ಕಾಳಗ ಮೂಡಲಪಾಯ ಯಕ್ಷಗಾನ ಪ್ರಸಂಗ, 31ರಂದು ರನ್ನನ ಗದಾಯುದ್ಧ ಘಟ್ಟದ ಕೋರೆ ಮೂಡಲಪಾಯ ಯಕ್ಷಗಾನ ಪ್ರಸಂಗ ಹಾಗೂ ಆಗಸ್ಟ್ 1 ರಂದು ಕುವೆಂಪು ಅವರ ರಚನೆಯ ಬೊಮ್ಮನಹಳ್ಳಿಯ ಕಿಂದರಿ ಜೋಗಿ ನಾಟಕ ಪ್ರದರ್ಶನವನ್ನು ಮಂಡ್ಯದ ಸದ್ವಿದ್ಯಾ ಶಾಲಾ ರಂಗ ತಂಡ ನಡೆಸಿಕೊಡಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ಸಂಘದ ನಿರ್ದೇಶಕರಾದ ನಾಗಪ್ಪ, ಸೋಮಶೇಖರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!