Thursday, September 19, 2024

ಪ್ರಾಯೋಗಿಕ ಆವೃತ್ತಿ

ಅ.16 ರಿಂದ ಶ್ರೀರಂಗಪಟ್ಟಣ ದಸರಾ : ಯಾವ್ಯಾವ ಕಾರ್ಯಕ್ರಮ ನಡೆಯಲಿವೆ… ಇಲ್ಲಿದೆ ಮಾಹಿತಿ….

ಮಂಡ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಅಕ್ಟೋಬರ್ 16 ರಿಂದ 18 ರವರೆಗೆ ಶ್ರೀರಂಗಪಟ್ಟಣ ದಸರಾ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಅಕ್ಟೋಬರ್ 16 ರಂದು ಮಧ್ಯಾಹ್ನ 12.30 ಕ್ಕೆ ನಂದಿಧ್ವಜ ಪೂಜೆ ಹಾಗೂ ಮಧ್ಯಾಹ್ನ 2.30 ರಿಂದ 3.15 ರವರೆಗೆ ಸಲ್ಲುವ ಶುಭಮಕರ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಹಾಗೂ ಜಂಭೂ ಸವಾರಿ ಮೆರವಣಿಗೆಗೆ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್‌ ಚಾಲನೆ ನೀಡಲಿದ್ದಾರೆ.

ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ಅಕ್ಟೋಬರ್ 16 ರಂದು ಸಂಜೆ 6 ಗಂಟೆಗೆ ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎ.ಬಿ ರಮೇಶ್ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಕಾನೂನು ಸಂಸದೀಯ ವ್ಯವಹಾರಗಳ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ, ವೈದ್ಯಕೀಯ ಶಿಕ್ಷಣ ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಸಂಸದೆ ಸುಮಲತಾ ಅಂಬರೀಶ್, ವಿಧಾನ ಪರಿಷತ್ ಶಾಸಕರುಗಳಾದ ಮರಿತಿಬ್ಬೇಗೌಡ, ಮಧು ಜಿ ಮಾದೇಗೌಡ, ದಿನೇಶ್ ಗೂಳೀಗೌಡ, ವಿಧಾನ ಸಭಾ ಶಾಸಕರುಗಳಾದ ಪಿ.ಎಂ ನರೇಂದ್ರಸ್ವಾಮಿ, ಪಿ. ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ ಮಂಜು, ಕೆ.ಎಂ ಉದಯ್ ಹಾಗೂ ಕಿರಂಗೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಹೆಚ್.ಪಿ ಶೃತಿ ಭಾಗವಹಿಸುವರು.

ಯಾವ್ಯಾವ ಕಾರ್ಯಕ್ರಮ ನಡೆಯಲಿವೆ

ಶ್ರೀರಂಗಪಟ್ಟಣ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 16 ರಿಂದ 18 ರವರೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆ ಹಾಗೂ ವಿವಿಧ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮದ ವಿವರ ಹೀಗಿದೆ.

ಅಕ್ಟೋಬರ್ 16ರಂದು ಬೆಳಿಗ್ಗೆ 6 ರಿಂದ 8 ರವರೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಿಂದ ಗಂಜಾಂ ಮಾರ್ಗವಾಗಿ ಕರಿಘಟ್ಟ ದೇವಸ್ಥಾನದವರೆಗೆ 29 ವರ್ಷ ಒಳಗಿನವರಿಗೆ ಹಾಗೂ 30 ವರ್ಷ ಮೇಲ್ಪಟ್ಟವರಿಗೆ ಶ್ರೀರಂಗಪಟ್ಟಣ ದಸರಾ ಮ್ಯಾರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ರಿಂದ 12:30 ರವರೆಗೆ ಬಾಬುರಾಯನಕೊಪ್ಪಲಿನಲ್ಲಿರುವ ಭಾರತಿ ಚಿತ್ರಮಂದಿರದಲ್ಲಿ ಎಳೆಯರು ನಾವು ಗೆಳೆಯರು ಎಂಬ ಮಕ್ಕಳ ಚಿತ್ರ, ಗಂಜಾAನ ಶ್ರೀದೇವಿ ಚಿತ್ರಮಂದಿರದಲ್ಲಿ ಕಾಂತಾರ ಚಿತ್ರದ ಸಿನಿಮೋತ್ಸವ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12:30 ಗಂಟೆಗೆ ಶ್ರೀರಂಗಪಟ್ಟಣ ಕಿರಂಗೂರು ಬನ್ನಿಮಂಟಪದಲ್ಲಿ ನಂದಿ ಧ್ವಜ ಪೂಜೆ ನಡೆಯಲಿದೆ. ಮಧ್ಯಾಹ್ನ 2:30 ರಿಂದ 3.15 ರವರೆಗೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ, ದಸರಾ ಉದ್ಘಾಟನೆ ಮತ್ತು ಜಂಬು ಸವಾರಿ ಮೆರವಣಿಗೆ ನಡೆಯಲಿದೆ. ದಸರಾ ಮಹೋತ್ಸವದಲ್ಲಿ ಮಹೇಂದ್ರ (ಅಂಬಾರಿ ಆನೆ) ವಿಜಯ, ವಿಜಯಲಕ್ಷ್ಮಿ ಆನೆಗಳು ಭಾಗವಹಿಸಲಿದೆ.

ಶ್ರೀರಂಗಪಟ್ಟಣ ಕಿರಂಗೂರು ಬನ್ನಿಮಂಟಪದಲ್ಲಿ ವಿವಿಧ ಕಲಾತಂಡಗಳಾದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ದ ಚಿತ್ರಗಳ ಮೆರವಣಿಗೆ ನಡೆಯಲಿದೆ.

ಸಂಜೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ದಸರಾ ಮತ್ತು ವೇದಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾತ್ರಿ 8 ಗಂಟೆಗೆ ಬೆಂಗಳೂರು ಪ್ರಭಾತ್ ಕಲಾವಿದರ ತಂಡದ ವತಿಯಿಂದ ಮತ್ತು ರಾತ್ರಿ 9\ಗೆ ರಘು ದೀಕ್ಷಿತ್ ಮತ್ತು ತಂಡದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಸರಾ ವೈವಿಧ್ಯಮಯ ಯೋಗ ಪ್ರದರ್ಶನ

ಅ.17ರಂದು ಬೆಳಿಗ್ಗೆ 6 ಗಂಟೆಗೆ ಜಿಲ್ಲಾ ಆಯುಷ್ ಇಲಾಖಾ ವತಿಯಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ದಸರಾ ವೈವಿಧ್ಯಮಯ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರೆಗೆ 29 ವರ್ಷ ಒಳಗಿನವರಿಗೆ ಮತ್ತು 30 ವರ್ಷ ಮೇಲ್ಪಟ್ಟವರಿಗೆ ಚಾರಣ ಸ್ಪರ್ಧೆ ಏರ್ಪಡಿಸಲಾಗಿದೆ.

ಬೆಳಗ್ಗೆ 10 ರಿಂದ 12.30 ರವರೆಗೆ ಬಾಬುರಾಯನಕೊಪ್ಪಲು ಭಾರತಿ ಚಿತ್ರಮಂದಿರದಲ್ಲಿ ಇಂಗಳೆ ಮಾರ್ಗ ಎಂಬ ಮಕ್ಕಳ ಚಿತ್ರ, ಗಂಜಾಂನ ಶ್ರೀದೇವಿ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರದ ಸಿನಿಮೋತ್ಸವ ಕಾರ್ಯಕ್ರಮ ನಡೆಯಲಿದೆ.

ಮಹಿಳಾ ದಸರಾ

ಅ.17ರಂದು ಬೆಳಿಗ್ಗೆ 10 ಗಂಟೆಗೆ ಶ್ರೀರಂಗನಾಥ ಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ್ಯ ವಿವಾಹ ನಿಷೇಧ ಕುರಿತ ಗೀತೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕುರಿತ ನಾಟಕ ಮತ್ತು ಜನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಕವಿಗೋಷ್ಠಿ: ಮಧ್ಯಾಹ್ನ 2.00 ಗಂಟೆಗೆ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3.00 ಗಂಟೆಗೆ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ಮಧ್ಯಾಹ್ನ 2.45 ರಿಂದ 3 ಗಂಟೆವರೆಗೆ ಭರತನಾಟ್ಯ, ಮಧ್ಯಾಹ್ನ 3 ರಿಂದ 3.20 ರವರೆಗೆ ಜಾನಪದ ಗೀತೆ, ತಂಬೂರಿ ಕಥೆಗಳು, ಭಕ್ತಿಗೀತೆ, ಮಧ್ಯಾಹ್ನ 3.20 ರಿಂದ 3.40 ರವರೆಗೆ ಸಾಮೂಹಿಕ ನೃತ್ಯ, ಸಂಜೆ 3.40 ರಿಂದ 4 ಗಂಟೆಯವರೆಗೆ ಕರಗದ ಕೋಲಾಟ, ಸಂಜೆ 4.00 ರಿಂದ 4.15 ರವರೆಗೆ ಸುಗಮ ಸಂಗೀತ, ಸಂಜೆ 4:15 ರಿಂದ 4:30ರವರೆಗೆ ಸೂತ್ರದ ಬೊಂಬೆ ಆಟ, ಸಂಜೆ 4:30 ರಿಂದ 4:45 ರವರೆಗೆ ಸುಗಮ ಸಂಗೀತ, ಸಂಜೆ 4:45 ರಿಂದ 5.00 ಗಂಟೆಯವರೆಗೆ ಪಿಯಾನೋ, ನಾದಸ್ವರ, ಸಂಜೆ 5.00 ರಿಂದ 5.15 ರವರೆಗೆ ಭಜನೆ, ಸಂಜೆ 5:15 ರಿಂದ 5:30 ರವರೆಗೆ ಜಿಲ್ಲಾ ಆಯುಷ್ ಇಲಾಖಾ ವತಿಯಿಂದ ಯೋಗ ನೃತ್ಯ ರೂಪಕ, ಸಂಜೆ 5:30 ರಿಂದ 5.50 ರವರೆಗೆ ಜಾನಪದ ಝೇಂಕಾರ, ಸಂಜೆ 5.50 ರಿಂದ 6.05 ರವರೆಗೆ ಭರತನಾಟ್ಯ, ಸಂಜೆ 6.05 ರಿಂದ 6:45 ರವರೆಗೆ ಕನ್ನಡ ಜನಪದ ಸಂಗೀತ ನಡೆಯಲಿದೆ.

ಸಂಜೆ 7 ಗಂಟೆಗೆ ಕುನಲ್ ಗಂಜವಾಲ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 9 ಗಂಟೆಗೆ ಆಲ್ ಓಕೆ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಅ.18ರಂದು ರೈತ ದಸರಾ-ವಿಚಾರ ಸಂಕಿರಣ

ಅ.18 ರಂದು ಬೆಳಿಗ್ಗೆ 10.00 ಗಂಟೆಗೆ ಪಶು ಸಂಗೋಪನೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ವತಿಯಿಂದ ರೈತ ದಸರಾ ಮತ್ತು ವಿಚಾರ ಸಂಕಿರಣ, ಬೆಳಿಗ್ಗೆ 10.00 ರಿಂದ 12:30 ರವರೆಗೆ ಬಾಬುರಾಯನಕೊಪ್ಪಲು ಭಾರತಿ ಚಿತ್ರಮಂದಿರದಲ್ಲಿ ಸಚಿನ್ ತೆಂಡೂಲ್ಕರ್ ಅಲ್ಲ ಎಂಬ ಮಕ್ಕಳ ಚಿತ್ರ, ಗಂಜಾಂನ ಶ್ರೀದೇವಿ ಚಿತ್ರಮಂದಿರದಲ್ಲಿ ನಾಗರಹಾವು ಚಿತ್ರದ ಸಿನಿಮೋತ್ಸವ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 2.00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 3.00 ರಿಂದ 3.20 ರವರೆಗೆ ಭರತನಾಟ್ಯ, ಮಧ್ಯಾಹ್ನ 3.20 ರಿಂದ 3.40 ರವರೆಗೆ ಸಂಗೀತ, ಮಧ್ಯಾಹ್ನ 3:40 ರಿಂದ 4.00 ಗಂಟೆಯವರೆಗೆ ಜಾನಪದ ಗೀತೆ, ಭಕ್ತಿ ಗೀತೆ, ಕೀರ್ತನೆ, ಸಂಜೆ 4.00 ರಿಂದ 4.20 ರವರೆಗೆ ಭರತನಾಟ್ಯ, ಸಂಜೆ 4.20 ರಿಂದ 4.40 ರವರೆಗೆ ಹಿಂದುಸ್ತಾನಿ ಸಂಗೀತ/ ಸುಗಮ ಸಂಗೀತ, ಸಂಜೆ 4:40 ರಿಂದ 5.00 ಗಂಟೆಯವರೆಗೆ ಸ್ಯಾಕ್ಸೋಫೋನ್ ನಾದಸ್ವರ, ಸಂಜೆ 5.00 ರಿಂದ 5.15 ರವರೆಗೆ ಯೋಗ ನಮನ, ಸಂಜೆ 5:15 ರಿಂದ 5:30ರವರೆಗೆ ಸುಗಮ ಸಂಗೀತ/ಕುವೆAಪುರವರ ಗೀತಾ ಗಾಯನ ಸಂಜೆ 5:30 ರಿಂದ 5:45 ರವರೆಗೆ ಭರತನಾಟ್ಯ, ಸಂಜೆ 5:45 ರಿಂದ 6.00 ಗಂಟೆಯವರೆಗೆ ಜಾನಪದ ಗೀತೆ, ಭಕ್ತಿ ಗೀತೆ, ಭಾವಗೀತೆ, ಸಂಜೆ 6.00 ರಿಂದ 6.20 ರವರೆಗೆ ನಾಡು ನುಡಿ ಸ್ವರೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಜೆ 6.20 ರಿಂದ 7.00 ರವರೆಗೆ ತತ್ವಪದ, ದಾಸರಪದ, ವಚನಗಾಯನ ನಡೆಯಲಿದೆ.

ಸಂಜೆ 7.00 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದ ಶ್ರೀರಂಗ ವೇದಿಕೆಯಲ್ಲಿ ಶ್ರೀರಂಗಪಟ್ಟಣ ದಸರಾ ಸಮಾರೋಪ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ರಾಜೇಶ್ ಕೃಷ್ಣನ್ ಮತ್ತು ತಂಡದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಸರಾ ವಸ್ತು ಪ್ರದರ್ಶನ: ಶ್ರೀರಂಗಪಟ್ಟಣ ದಸರಾ ಅಂಗವಾಗಿ ಅಕ್ಟೋಬರ್ 16ರಿಂದ 18ರವರೆಗೆ ಬೆಳಗ್ಗೆ 10.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಕರಕುಶಲ ಸಾಮಗ್ರಿಗಳು, ಗುಡಿ ಕೈಗಾರಿಕಾ ಸಾಮಗ್ರಿಗಳು, ಆರ್ಗಾನಿಕ್ ಬೆಲ್ಲ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಮತ್ತು ಮಾಹಿತಿಗಳ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಆಹಾರಮೇಳ: ಶ್ರೀರಂಗಪಟ್ಟಣ ದಸರಾ ಅಂಗವಾಗಿ ಅಕ್ಟೋಬರ್ 16ರಿಂದ 18ರವರೆಗೆ ಬೆಳಿಗ್ಗೆ 10.00 ಗಂಟೆಯಿAದ ಮಂಡ್ಯ ಸಾಂಸ್ಕೃತಿಕ ಸೊಗಡನ್ನು ಸೂಚಿಸುವಂತಹ ಬೆಲ್ಲದ ಖಾದ್ಯಗಳು, ಮೇಲುಕೋಟೆ ಪುಳಿಯೋಗರೆ, ಗಂಜಾಂ ಗುಲ್ಕನ್ ಉತ್ಪನ್ನಗಳು ಹಾಗೂ ಕರ್ನಾಟಕದ ಪ್ರಸಿದ್ಧ ಖಾದ್ಯಗಳಾದ ದಾವಣಗೆರೆ ಬೆಣ್ಣೆ ದೋಸೆ, ಬಂಗಾರಪೇಟೆ ಚಾಟ್ಸ್, ಬೆಳಗಾವಿ ಕುಂದ, ಮಂಗಳೂರು ಬೋಂಡಾ, ಮಿರ್ಚಿ ಮಂಡಕ್ಕಿ, ರೊಟ್ಟಿ ಖಾದ್ಯಗಳ ಅನಾವರಣ ಮತ್ತು ಮಾರಾಟ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!