Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ ಕೋಟೆಯ ರಕ್ಷಣಾ ಗೋಡೆ ಕುಸಿತ


  • ಪುರಾತತ್ವ ಇಲಾಖೆ ನಿರ್ಲಕ್ಷ್ಯ : ಶಿಥಿಲಗೊಂಡ ಕೋಟೆ 

  • 70 ಮೀಟರ್ ಉದ್ದದ ರಕ್ಷಣಾ ತಡೆಗೋಡೆ ಕುಸಿತ

ಶ್ರೀರಂಗಪಟ್ಟಣದ ಸ್ನಾನ ಘಟ್ಟದ ಬಳಿ ಇರುವ ರಕ್ಷಣಾ ಕೋಟೆಯ ತಡೆಗೋಡೆ ಸುಮಾರು  70 ಮೀಟರ್ ಉದ್ದದಷ್ಟು ಕುಸಿದು ಬಿದ್ದಿದೆ.

ರಕ್ಷಣಾ ಗೋಡೆಗೆ ಅಳವಡಿಸಿದ್ದ ದಿಂಡು ಕಲ್ಲುಗಳು ಉರುಳಿ ಬಿದ್ದಿವೆ, ಕೋಟೆಯ ಸುತ್ತಾಮುತ್ತಾ ಗಿಡ ಗಂಟೆಗಳು ಬೆಳೆದುಕೊಂಡು ಶಿಥಿಲಗೊಂಡಿದೆ.

ಭಾರತೀಯ ಪುರಾತತ್ವ ಇಲಾಖೆಯಿಂದ ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿರುವ ಈ  ಐತಿಹಾಸಿಕ ಕೋಟೆ,  ಪ್ರತಿ ಬಾರಿ ಮಳೆಗಾಲದಲ್ಲಿ ಹಂತ ಹಂತವಾಗಿ ಕುಸಿದು ಬೀಳುತ್ತಿದೆ.

ಕುಸಿದಿರೊ ಭಾಗವನ್ನು ಸರಿಯಾಗಿ ದುರಸ್ತಿ ಮಾಡದೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ, ಪ್ರತಿ ಬಾರಿ ಕುಸಿದು ಬೀಳುತ್ತಿದ್ದರೂ ಸರಿಯಾದ ರೀತಿಯಲ್ಲಿ ನಿರ್ವಹಣೆ ನಡೆಯುತ್ತಿಲ್ಲ, ಐತಿಹಾಸಿಕ ಮಹತ್ವವಿರುವ ಇಂತಹ ಕೋಟೆಗಳ ರಕ್ಷಣೆ ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆಗೆ ಕೋಟ್ಯಾಂತರ ರೂ. ಆದಾಯ ಬರುತ್ತಿದ್ದರೂ, ಕೋಟೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!