ಶ್ರೀರಂಗಪಟ್ಟಣ ತಾಲೂಕು ಕಾರ್ಯ ನಿರತ ಪತ್ರಕರ್ತ ಸಂಘಕ್ಕೆ ನೂತನ ಅಧ್ಯಕ್ಷ ರಾಗಿ ಉದಯವಾಣಿ ತಾಲೂಕು ವರದಿಗಾರ ಗಂಜಾಂ ಮಂಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಪತ್ರಕರ್ತ ಸಂಘದ ಕಚೇರಿಯಲ್ಲಿ ಇಂದು ಸಂಜೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸರ್ವ ಸದಸ್ಯರ ಸಮ್ಮತದ ಮೇರೆಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಗಂಜಾಂ ಮಂಜು ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಆಂದೋಲನ ಪತ್ರಿಕೆಯ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಪ್ರಭ ಪತ್ರಿಕೆಯ ನವೀನ್ ಕುಮಾರ್, ಖಜಾಂಚಿಯಾಗಿ ಕೆಮ್ಮುಗಿಲು ಪತ್ರಿಕೆಯ ಪ್ರಕಾಶ್ ಸಹ ಕಾರ್ಯದರ್ಶಿಯಾಗಿ ವಿಜಯವಾಣಿ ಪ್ರತ್ರಿಕೆಯ ಭರತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ನಿರ್ದೇಶಕರಾಗಿ ರವೀಶ್ ಗೌಡ,ಸಂತೋಷ್ ಕುಮಾರ್ ,ದೀಪಕ್,ಕೃಷ್ಣಮೂರ್ತಿ, ಮಂಜುನಾಥ್ ಶಾಸ್ತ್ರಿ, ಸೋಮಶೇಖರ್,ಲೋಕೇಶ್,ಸತೀಶ್,ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರು.
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಿತು.
ಈ ವೇಳೆ ತಾಲೂಕು ಪತ್ರಕರ್ತ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜು ಅವರಿಗೆ ಜಿಲ್ಲೆಯ ಹಲವು ಪತ್ರಕರ್ತರು ಶುಭಾಶಯ ಕೋರಿದರು.
ಚುನಾವಣೆ ವೇಳೆ ರಾಜ್ಯ ಕಾರ್ಯದರ್ಶಿ ಕೆರಗೋಡು ಸೋಮಶೇಖರ್,ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ರಾಜ್ಯ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್,ಜಿಲ್ಲಾ ಕಾರ್ಯದರ್ಶಿ ಪಾಂಡವಪುರ ಜಯರಾಮ್ ಸೇರಿದಂತೆ ಹಲವರಿದ್ದರು.