Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣದಲ್ಲಿ ಎಲ್ಲಾ ರೈಲುಗಳ ನಿಲುಗಡೆಗೆ ಆಗ್ರಹ

ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಶ್ರೀರಂಗಪಟ್ಟಣದಲ್ಲಿ ಎಲ್ಲಾ ರೈಲುಗಳ ನಿಲುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ದ್ರಾವಿಡ ಕನ್ನಡಿಗರ ಬಳಗ ಆಗ್ರಹಿಸಿದೆ.

ಶ್ರೀರಂಗಪಟ್ಟಣವು ಐತಿಹಾಸಿಕ ಸ್ಥಳವಾಗಿದ್ದು, ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಸ್ಥಳೀಯ ವರ್ತಕರಿಗೆ ವ್ಯಾಪಾರವು ಆಗಲಿದೆ, ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಹೊಸ ಬೆಂಗಳೂರು-ಮೈಸೂರು ಹೆದ್ದಾರಿ ನೇರವಾಗಿ ಮೈಸೂರಿಗೆ ಹೋಗುವುದರಿಂದ ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾಗಿ ಪರ್ಯಾಯ ಮಾರ್ಗಗಳಲ್ಲಿ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸಬೇಕು. ಈ ಕಾರಣದಿಂದ ಮೈಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಎಲ್ಲಾ ರೈಲುಗಳು ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು.

ಬೇರೆ ಬೇರೆ ರಾಜ್ಯಗಳಿಂದ ಬರುವ ಎಲ್ಲಾ ರೈಲುಗಳು ಶ್ರೀರಂಗಪಟ್ಟಣದಲ್ಲಿ ನಿಲ್ಲುತ್ತವೆ, ನಂತರ ಇಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡು ನಂತರ ಮೈಸೂರಿಗೆ ಟ್ಯಾಕ್ಸಿಯಲ್ಲಿ ಹೋಗೋಣ ಎಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ, ಇದು ಶ್ರೀರಂಗಪಟ್ಟಣದ ಎಲ್ಲಾ ಸ್ಥಳೀಯರಿಗೆ ಉಪಯುಕ್ತವಾಗಿದೆ.

ಆದರೆ, ಪ್ಲಾಟ್‌ಫಾರ್ಮ್ ಸಮಸ್ಯೆಯಿಂದಾಗಿ ಎಲ್ಲಾ ರೈಲುಗಳು ಮೈಸೂರು ನಿಲ್ದಾಣದ ಹೊರ ಮತ್ತು ಬೆಂಗಳೂರು ನಿಲ್ದಾಣದ ಹೊರಭಾಗದಲ್ಲಿ 45 ನಿಮಿಷದಿಂದ ಒಂದು ಗಂಟೆಯವರೆಗೆ ನಿಲ್ಲುತ್ತವೆ. ಶ್ರೀರಂಗಪಟ್ಟಣದಲ್ಲಿ 2 ನಿಮಿಷ ನಿಲ್ಲಿಸಿದರೆ ಯಾವುದೇ ರೈಲಿಗೆ ತೊಂದರೆಯಾಗುವುದಿಲ್ಲ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ, ಅನೇಕ ಬಡ ಅಥವಾ ಅತ್ಯಂತ ಬಡ ಕುಟುಂಬಗಳಿಗೆ ಜೀವನೋಪಾಯದ ಸಾಧ್ಯತೆ ಇದೆ. ಜೊತೆಗೆ ಆಟೋ ರಿಕ್ಷಾ ಚಾಲಕರಿಗೂ ಅನುಕೂಲವಾಗಲಿದೆ ಎಂದು ಬಳಗವು ತಿಳಿಸಿದೆ.

ನಾಳೆ ದ್ರಾವಿಡ ಕನ್ನಡಿಗರ ಬಳಗದ ಸಭೆ 

ಶ್ರೀರಂಗಪಟ್ಟಣದಲ್ಲಿ ರೈಲುಗಳ ನಿಲುಗಡೆ ಸಂಬಂಧ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳು ನಿಟ್ಟಿನಲ್ಲಿ ದ್ರಾವಿಡ ಕನ್ನಡಿಗರ ಬಳಗದ ವತಿಯಿಂದ ಡಿ.25ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀ ರಂಗಪಟ್ಟಣದ ರೈಲ್ವೇ ಸ್ಟೇಷನ್ ಮುಖ್ಯದ್ವಾರದ ಮುಂದಿನ ಅಂಗಳದಲ್ಲಿ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಳಗದ ಮುಖಂಡ ಅಭೀಗೌಡ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!