ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದೊಡ್ಡಘಟ್ಟ ಗ್ರಾಮದ ಎಲ್.ಸುರೇಶ್ ಆಯ್ಕೆಯಾಗಿದ್ದಾರೆ.
ಇಂದು ಚುನಾವಣೆ ನಿಗದಿಯಾಗಿತ್ತು, ಆದರೆ ಸರ್ವ ಸದಸ್ಯರ ಒಪ್ಪಂದದ ಮೇರೆಗೆ ಸುರೇಶ್ ಅವರು ಅವಿರೋಧ ಆಯ್ಕೆಯಾದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ರೈತ ಸಂಘಟನೆಯ ಪರಸ್ಪರ ಹೊಂದಾಣಿಕೆ ಸಹಕಾರದಿಂದ ಇಂದು ಅಧ್ಯಕ್ಷರಾಗಿ ಆಯ್ಕೆ ಆಗಿದ್ದೇನೆ. ಇದೇ ರೀತಿ ಮುಂದಿನ ದಿನಗಳಲ್ಲಿ ಪರಸ್ಪರ ಸಹಕಾರ ಕೊಟ್ಟರೆ ಸುಗಮ ಆಡಳಿತ ಜೊತೆ ಪಟ್ಟಣದ ಅಭಿವೃದ್ಧಿ, ರೈತರ ಕೆಲಸಗಳು ಸಾಧ್ಯವಾಗಲಿವೆ. ಅನೇಕ ವರ್ಷಗಳ ನಂತರ ರೈತ ಸಂಘಟನೆಯಿಂದ ಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದೇನೆ. ನನ್ನ ಕೈಲಾದ ಮಟ್ಟಿಗೆ ರೈತ ಪರ ಕೆಲಸಗಳನ್ನ ಅಧಿಕಾರಿ ವರ್ಗದವರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘಟನೆ ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಹಾರ ತುರಾಯಿ ಹಾಕಿ ಸಂತಸ ವ್ಯಕ್ತಪಡಿಸಿದರು. ಸುರೇಶ್ ಅವರನ್ನು ಸಂಘದ ಕಚೇರಿಯಿಂದ ನಾಗಮಂಗಲ ಪಟ್ಟಣದ ಪ್ರಮುಖ ಬೀದಿಯಲ್ಲಿ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಸುರೇಶ್ ಅವರು ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಧರಣಿಕುಮಾರ್, ಉಪಾಧ್ಯಕ್ಷ ಬಿ.ಜಿ ರವಿ, ಕುಮಾರ್ ಎಂ ಬಿ,ಲಕ್ಷ್ಮಣ್, ಗೋಪಾಲಣ್ಣ, ಮುಖಂಡರಾದ ಪದ್ಮನಾಭ್, ಪಾಪಣ್ಣ, ಯಾಸಿನ್, ವೆಂಕಟೇಶ್, ವಿಜಯ್ ಕುಮಾರ್, ಪುಟ್ಟಸ್ವಾಮಿ, ಸತ್ಯಣ್ಣ ಮತ್ತಿತರರಿದ್ದರು




