ಮದ್ದೂರು ತಾಲ್ಲೂಕಿನ ಭಾರತೀ ಎಜುಕೇಷನ್ ಟ್ರಸ್ಟ್, ಭಾರತೀ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಮತ್ತು ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ”ಸಂಶೋಧನೆಯ ವಿಧಿ ವಿಧಾನಗಳು – ಮರುಪರಿಶೀಲನೆ” ಕುರಿತ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವು ಮೇ 30ರಂದು ಬೆಳಿಗ್ಗೆ 10.30ಗಂಟೆಗೆ ಭಾರತೀನಗರದ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಸಮಾರಂಭ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಡೀನ್ ಡಾ. ಎಂ.ಜಿ.ಮಂಜುನಾಥ ಭಾಗವಹಿಸುವರು. ಭಾರತೀ ಎಜುಕೇಷನ್ ಟ್ರಸ್ಟ್ ಸಿಇಓ ಆಶಯ್ ಜಿ. ಮಧು, ಪ್ರಾಂಶುಪಾಲ ಡಾ.ಪಿ.ನಾಗೇಂದ್ರ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್.ನಾಗರಾಜ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್.ಮಹದೇವಸ್ವಾಮಿ, ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಪಿ.ನಾಗೇಂದ್ರ ಹಾಗೂ ಐ.ಕ್ಯೂ.ಎ.ಸಿ. ಸಹ ಪ್ರಾಧ್ಯಾಪಕ ಪ್ರೊ. ಎಸ್.ರೇವಣ್ಣ ಉಪಸ್ಥಿತರಿರುವರು.
ಗೋಷ್ಠಿ-1 ರಲ್ಲಿ ‘ಬಹುಶಿಸ್ತೀಯ ಸಂಶೋಧನೆ’ ಕುರಿತು ಪ್ರಾಧ್ಯಾಪಕ ಡಾ.ಎಂ.ಜಿ.ಮಂಜುನಾಥ ವಿಷಯ ಮಂಡಿಸುವರು. ಗೋಷ್ಠಿ-2 ರಲ್ಲಿ ‘ಜಾನಪದ ಸಂಶೋಧನೆ’ ಕುರಿತು ಡಾ.ಟಿ.ಗೋವಿಂದರಾಜ್ ವಿಷಯ ಮಂಡಿಸುವರು. ಗೋಷ್ಠಿ-3 ರಲ್ಲಿ ‘ಸಾಹಿತ್ಯ ಸಂಶೋಧನೆ’ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ವಿಷಯ ಮಂಡಿಸುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ನಾತಕೋತ್ತರ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಎಸ್.ನಾಗರಾಜ ವಹಿಸುವರು. ನಿವೃತ್ತ ಸಹ ಪ್ರಾಧ್ಯಾಪಕ ಡಾ.ಆರ್.ಸಿ.ದೇವರಾಜು ಸಮಾರೋಪ ಭಾಷಣ ಮಾಡುವರು.




