ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದ ಎಸ್.ಟಿ.ಜಿ ಪಬ್ಲಿಕ್ ಶಾಲೆಯಲ್ಲಿ ಮಾನ್ಸೂನ್ ಮ್ಯಾರಥಾನ್ ಓಟ ಇಂದು ನಡೆಯಿತು.
ಎಸ್.ಟಿ.ಜಿ ಮಾನ್ಸೂನ್ ಮ್ಯಾರಥಾನ್ ಗೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.
ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾನ್ಸೂನ್ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು.
ಚಿನಕುರಳಿ ಶಾಲೆಯಿಂದ ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ವಿದ್ಯಾರ್ಥಿಗಳು ಓಡುವ ಮೂಲಕ ಮ್ಯಾರಥಾನ್ ಯಶಸ್ವಿಗೊಳಿಸಿದರು.ಮ್ಯಾರಥಾನ್ ನಲ್ಲಿ ಪ್ರಥಮ,ದ್ವಿತೀಯ, ಹಾಗೂ ತೃತೀಯ ಸ್ಥಾನ ಪಡೆದ ಬಾಲಕ,ಬಾಲಕಿಯರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಪುತ್ರ ಶಿವರಾಜ್,ಆಡಳಿತದಲ್ಲಿ ಪ್ರಿನ್ಸಿಪಾಲ್ ಮಾಚಮ್ಮ, ಆಡಳಿತ ಅಧಿಕಾರಿ ನಿವೇದಿತಾ ನಾಗೇಶ್, ಗೋಪಾಲ್ ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.