Thursday, September 19, 2024

ಪ್ರಾಯೋಗಿಕ ಆವೃತ್ತಿ

ಓಬಿಸಿ, ಎಸ್ಸಿ-ಎಸ್ಟಿ ವಿದ್ಯಾರ್ಥಿ ವೇತನ ಕಡಿತಗೊಳಿಸಿದ್ದೇ ನಿಮ್ಮ ಯುವ ಸಬಲೀಕರಣವೇ? : ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

ಹಿಂದುಳಿದ ವರ್ಗ ಹಾಗೂ ಪರಿಶಿಷ್ಠ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಡಿತಗೊಳಿಸಿದ್ದೇ ನಿಮ್ಮ ಯುವ ಸಭಲೀಕರಣವೇ? ಯುವ ಜನರ ಮೇಲೆ ಕಾಳಜಿ ಇದ್ದಿದ್ದೇ ಆದರೆ ವಿದ್ಯಾರ್ಥಿ ವೇತನಕ್ಕೆ ಹಣ ನೀಡದಿರುವುದೇಕೆ ಎಂಬುದನ್ನ ಸ್ಪಷ್ಟಪಡಿಸಿ. ಯುವಸಮುದಾಯ ವಿದ್ಯಾವಂತರಾದರೆ ಉದ್ಯೋಗ ಕೇಳುತ್ತಾರೆ, ಪ್ರಶ್ನಿಸುತ್ತಾರೆ ಎಂಬ ಭಯವೇ? ಎಂದು ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟ್ವೀಟ್ ನಲ್ಲಿ ಪ್ರಶ್ನಿಸಿದೆ.

“>

“ಯುವ ಸಂಭಾಷಣೆ” ಮಾಡುವ ಸಿಎಂ ಬೊಮ್ಮಾಯಿ ಅವರೇ ನಿಷ್ಪಕ್ಷಪಾತವಾದ ಬಹಿರಂಗ ವೇದಿಕೆಯಲ್ಲಿ ನಿಂತು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೇ? ನಿಮ್ಮ ಭ್ರಷ್ಟ ಹಾಗೂ ಅಸಮರ್ಥ ಸರ್ಕಾರದಿಂದ ನೊಂದ ಯುವಜನರ ನೈಜ ಹಾಗೂ ವಾಸ್ತವಿಕ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೇ? ನೊಂದ 56 ಸಾವಿರ PSI ಅಭ್ಯರ್ಥಿಗಳಿಗೆ ನಿಮ್ಮ ಸರ್ಕಾರದ ಪರಿಹಾರವೇನು? ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಯುವ ಸಮುದಾಯದ ಸರ್ಕಾರಿ ನೌಕರಿಗಾಗಿ “ಲಂಚ ಕಡ್ಡಾಯ” ಎಂಬ ಸ್ಥಿತಿ ನಿರ್ಮಿಸಿದ್ದೀರಿ, ವಿಧಾನಸೌಧವೇ ಬ್ರೋಕರ್‌ಗಳ ಅಡ್ಡೆಯಾಗಿದೆ. ಬೊಮ್ಮಾಯಿ ಅವರೇ, ಸರ್ಕಾರಿ ಹುದ್ದೆಗಳಿಗೆ ರೇಟ್ ಕಾರ್ಡ್ ಹಾಕಿ ಮಾರುತ್ತಿರುವುದರಿಂದ ಹುದ್ದೆಗಳನ್ನು ಕೊಂಡುಕೊಳ್ಳಲು ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಒದಗಿಸುವಿರಾ ಹೇಗೆ!? ಒಬ್ಬ ಜವಾಬ್ದಾರಿಯುತ ಸಿಎಂ ಆಗಿ ಯುವ ಸಮುದಾಯಕ್ಕೆ ಮಾದರಿಯಾಗುವ, ಬುದ್ದಿ ಹೇಳುವ ಮಾತುಗಳನ್ನಾಡುವ ಬದಲು ಆಕ್ಷನ್‌ಗೆ ರಿಯಕ್ಷನ್ ಸಹಜ ಎನ್ನುವ ಮೂಲಕ ಸಮಾಜಘಾತುಕ ಕೆಲಸಗಳಿಗೆ ಪ್ರೋತ್ಸಾಹ ಕೊಟ್ಟಿದ್ದೀರಿ. ಅದರ ಪರಿಣಾಮವಾಗಿ ರಾಜ್ಯದಲ್ಲಿ ಹಲವು ಸಾವುಗಳಾಗಿವೆ, ಆ ಸಾವುಗಳಿಂದ ಪಾಪಪ್ರಜ್ಞೆ ಕಾಡುತ್ತಿಲ್ಲವೇ? ಎಂದು ವ್ಯಂಗ್ಯವಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!