Wednesday, September 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹಾಪ್‌ಕಾಮ್ಸ್ ಗಳಲ್ಲಿ ಕಬ್ಬಿನ ಜ್ಯೂಸ್ ; ಯು.ಸಿ.ಶೇಖರ್

ಮುಂದಿನ ದಿನಗಳಲ್ಲಿ ಹಾಪ್‌ಕಾಮ್ಸ್ ಮಳಿಗೆ ರೀತಿಯಲ್ಲಿಯೇ ಕಬ್ಬು ಜ್ಯೂಸ್ ಮಾರಾಟ ಮಾಡುವ ಸಂಕಲ್ಪವಿದೆ ಎಂದು ಜಿಲ್ಲಾತೋಟದ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಉಮ್ಮಡಹಳ್ಳಿ ಯು.ಸಿ.ಶೇಖರ್ ಹೇಳಿದರು.

ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ತೋಟದ ಬೆಳೆಗಾರರ ಉತ್ಪನ್ನಗಳ ಮಾರಾಟನ ಮತ್ತು ಸಂಸ್ಕರಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಡ್ಯ ನಗರದ ಪ್ರಮುಖ ಜನಸಂದಣಿ ವೃತ್ತಗಳಲ್ಲಿ ಯಂತ್ರ ಖರೀದಿಸಿ ಕಬ್ಬು ಜ್ಯೂಸ್ ಮಾರಾಟ ಮಾಡುವ ವ್ಯವಸ್ಥೆ ಚಿಂತಿಸಲಾಗುತ್ತಿವೆ, ಕಡಿಮೆ ಬಂಡವಾಳದಲ್ಲಿ ಲಾಭವಿದೆ, ಸಂಘಕ್ಕೆ ಆದಾಯ ಹೆಚ್ಚಾಗಲಿದೆ ಎಂದು ನುಡಿದರು.

ಎಲ್ಲಾ ನಿರ್ದೇಶಕರು-ಸದಸ್ಯರು, ನೌಕರರ ಸಹಕಾರದಿಂದ ಸಂಘವು ಹಂತ ಹಂತವಾಗಿ ಅಭಿವೃದ್ದಿಯೊಂದುತ್ತಿದೆ, ಲಾಭದಲ್ಲಿ ಸಂಘವು ಮುನ್ನಡೆಯುತ್ತಿದೆ, ಇದಕ್ಕೆ ಸಹಕಾರ ನೀಡಿದವರಿಗೆ ನಮನಗಳು ಎಂದರು.

ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ತೋಟಗಾರಿಗೆ ಉತ್ಪನ್ನಗಳ ಸರಬರಾಜು ಮಾಡಿದ ಸದಸ್ಯರನ್ನು ಅಭಿನಂದಿಸಲಾಯಿತು. ಸುಧೀರ್ಘವಾಗಿ ಚರ್ಚೆ ನಡೆಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬೋಜನಾಯಕ, ನಿರ್ದೇಶಕರಾದ ಎಸ್.ನಾಗೇಂದ್ರ, ಕೆ.ಜಿ.ತಮ್ಮಣ್ಣ, ಡಿ.ಕೃಷ್ಣೇಗೌಡ, ಬಿ.ಎಸ್.ರಾಮಚಂದ್ರ, ಕಾಳಯ್ಯ, ಸಿದ್ದರಾಮೇಗೌಡ, ಕೆ.ಎನ್.ಕೃಷ್ಣೇಗೌಡ, ಕೆ.ಮಹೇಶ್, ಇಂದ್ರಮ್ಮ, ಪುಟ್ಟಲಿಂಗಮ್ಮ, ಬಿ.ಪುಟ್ಟಬಸವೇಗೌಡ, ರಮೇಶ್‌ಚಂಗಪ್ಪ, ರೇಖಾ, ರೂಪಶ್ರೀ, ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್‌ಕುಮಾರ್, ಸದಸ್ಯ ಚನ್ನೇಗೌಡ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!