-
ಮಾನವ ಜನ್ಮ ಅತ್ಯಂತ ಶ್ರೇಷ್ಠ ಆತ್ಮ ಹತ್ಯೆ ಮಾಡಿಕೊಳ್ಳಬಾರದು
- ವಿಶ್ವ ಆತ್ಮಹತ್ಯೆ ತಡೆಗಟ್ಟುವ ಜಾಗೃತಿ
ಕಷ್ಠ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತಾ ಮಾನವ ಜನ್ಮ ಅತ್ಯಂತ ಶ್ರೇಷ್ಠ ಏನೇ ಕಷ್ಠ ಬಂದರು ಧೈರ್ಯದಿಂದ ಎದುರಿಸಬೇಕೆ ಹೊರತು ಆತ್ಮ ಹತ್ಯೆ ಮಾಡಿಕೊಳ್ಳಬಾರದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.
ಅವರು ಶ್ರೀರಂಗಪಟ್ಟಣದ ಟೌನ್ ವ್ಯಾಪ್ತಿಯ ರಂಗನಾಥ್ ನಗರದ ಅಂಗನವಾಡಿ ಕೇಂದ್ರದಲ್ಲಿ ತಾಯಂದಿರರಿಗಾಗಿ ಏರ್ಪಡಿಸಿದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ಜಾಗೃತಿ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವಿಶ್ವದಾದ್ಯಂತ ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ನೂರಾರು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದು ಇದನ್ನು ತಡೆಯಲು ಜಾಗೃತಿ ಅವಶ್ಯಕ ವಿದ್ದು ನಾವೆಲ್ಲ ಸೇರಿ ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆ ಮೂಡಿಸುವ ದರಜೊತೆಗೆ ನಮ್ಮ ಸುತ್ತ ಮುತ್ತ ಕಷ್ಠದಲ್ಲಿರುವವರ ಭಾವನೆಗಳಿಗೆ ಸ್ಪಂದಿಸಿ. ಕಷ್ಟ ವಿದ್ದಾಗ ಒತ್ತಡವಿದ್ದಾಗ ನೆರವಿಗಾಗಿ ಇನ್ನೊಬ್ಬರ ಸಲಹೆ ಪಡೆಯಬೇಕು.
ಒಂದು ನಿಮಿಷದ ಸಂಯಮದಿಂದ ಸುಂದರ ಜೀವನ ನಡೆಸಬಹುದು ಆತ್ಮಸ್ಥೈರ್ಯವಿದ್ದರೆ ಸಾವನ್ನು ಗೆಲ್ಲಬಹುದು ಭೂಮಿಯ ಮೇಲೆ ಹಸನ್ಮುಖಿಯಾಗಿ ಜೀವನ ನಡೆಸಬೇಕೇ ಹೊರತು ಆತ್ಮ ಹತ್ಯಗೆ ಕೈಹಾಕಬಾರದು ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಬದುಕನ್ನು ಬದುಕಿರುವ ತನಕವೂ ಪ್ರೀತಿಸಬೇಕು ಮರಣಕ್ಕಿಂತ ಜೀವನ ಮಿಗಿಲೆಂಬ ಧೋರಣೆಯಿರಬೇಕು. ಹೆಚ್ಚಿನ ಮಾಹಿತಿಗಾಗಿ 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ಎಂದು ಸಲಹೆ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ರೇಷ್ಮಾ, ಸುಜಾತ ಹಾಗೂ ಮಕ್ಕಳ ತಾಯಂದಿರು ಹಾಜರಿದ್ದರು ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಯಿತು.




