Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾವೇರಿ ಹೋರಾಟಕ್ಕೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರ ಬೆಂಬಲ

ಮಂಡ್ಯದಲ್ಲಿ 46 ದಿನಗಳ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಇನ್ನು ಮುಂದೆ ಮಂಡ್ಯಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.

ಅ.20ರಂದು ಇಂಡುವಾಳು ಗ್ರಾ.ಪಂ, ಸಿದ್ದಯ್ಯನ ಕೊಪ್ಪಲು, ಸುಂಡಹಳ್ಳಿ, ಕಿರಗಂದೂರು, ಮೋಳೆ ಕೊಪ್ಪಲು ಗ್ರಾಮದ ಜನತೆ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅ.21ರಂದು ಗೋಪಾಲಪುರ, ಹೆಚ್.ಕೋಡಿಹಳ್ಳಿ, ಕೋಡಿಹಳ್ಳಿ ಫಾರಂ ಮತ್ತು ಸರ್ಕಾರಿ ಪದವಿ ಕಾಲೇಜು ಕಲಾವಿಭಾಗದ ವಿದ್ಯಾರ್ಥಿಗಳು, 22ರಂದು ಶಿವಳ್ಳಿ, ಗೊರವಾಲೆ, ಮರಡಿಪುರ, ಗುನ್ನಾಯಕನಹಳ್ಳಿ, ನಗರಕೆರೆ ಗ್ರಾಪಂ ವ್ಯಾಪ್ತಿ. ಹುಲಿಗೆರೆಪುರ, ಮಾಲಗಾರನಹಳ್ಳಿ, ಉಪ್ಪಾರದೊಡ್ಡಿ, ಸೊಂಪುರ, ವೈದ್ಯನಾಥಪುರ, ಅ.23 ರಂದು ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ ), ಅ.24 ರಂದು. ಹೆಚ್.ಮಲ್ಲಿಗೆರೆ, ಸಂಪಹಳ್ಳಿ, ಶಂಭೂನಹಳ್ಳಿ,ಬೀರಗೌಡನಹಳ್ಳಿ, ಬಿ. ಹೊಸಹಳ್ಳಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ.

ಅ.25ರಂದು ರೈತ, ಸ್ತ್ರೀಶಕ್ತಿ, ಕನ್ನಡಪರ ಹಾಗೂ ಸಂಜೀವಿನಿ ಮಹಿಳಾ ಸಂಘಟನೆಗಳು ಮಹಿಳಾ ಸಂಘಟನೆಗಳು, ಸರ್ಕಾರಿ ಪದವಿ ಕಾಲೇಜು ವಾಣಿಜ್ಯ ವಿಭಾಗ ವಿದ್ಯಾರ್ಥಿಗಳು ಹೋರಾಟ ಮಾಡಲಿದ್ದಾರೆ. ಅ.26 ರಂದು ಕೀಲಾರ ಗ್ರಾಮಸ್ಥರು ಹಾಗೂ ಮಾಂಡವ್ಯ ಪದವಿ ಕಾಲೇಜು, ಅ.27 ರಂದು ಸಾತನೂರು.ಕೊಮ್ಮೇರಹಳ್ಳಿ, ಹೊನಗಾನಹಳ್ಳಿ, ಹಾಗೂ ಮಹಿಳಾ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಅ.28 ರಂದು ಸಂತಕಸಲಗೆರೆ, ಕಾರಸವಾಡಿ ಮಾಂಡವ್ಯ ಐಟಿಐ ಕಾಲೇಜು ವಿದ್ಯಾರ್ಥಿಗಳು, ಅ.29 ರಂದು ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂಡ್ಯ ಪಣಕನಹಳ್ಳಿ ಕೋಣನಹಳ್ಳಿ ತಂಡಸನಹಳ್ಳಿ ಚಿನ್ನಗಿರಿದೊಡ್ಡಿ ಮಹಾತ್ಮಗಾಂಧಿ ಬಡಾವಣೆ (ತಿಟ್ಟು) ಅ.30 ರಂದು ತಗ್ಗಹಳ್ಳಿ, ಕಮ್ಮನಾಯಕನಹಳ್ಳಿ, ಕೋಲಕಾರನದೊಡ್ಡಿ ಟಿ.ಮಲ್ಲಿಗೆರೆ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು (ಮಹಾವಿದ್ಯಾಲಯ), 31 ರಂದು ಮಂಡ್ಯ ನಗರದ ವಾಯು ವಿಹಾರಿಗಳ ಬಳಗ ಕಾರ್ಯಕರ್ತರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ.

ಕಡ್ಲೆಪುರಿ ತಿಂದು ಪ್ರತಿಭಟನೆ

ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಗುರುವಾರ ವಿವಿಧ ಸಂಘಟನೆಗಳು ಹಾಗೂ ರೈತರು ಪ್ರತಿಭಟನೆ ನಡೆಸಿ, ಕಡ್ಲೆಪುರಿ ತಿಂದು ಹೋರಾಟ ಮುಂದುವರಿಸಿದರು. ರೈತರು, ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ಕಡ್ಲೆಪುರಿ ಪರಿಷೆ ಇಟ್ಟು ರೈತರಿಗೆ ದ್ರೋಹ ಮಾಡಿ, ದಸರಾ ಸಂಭ್ರಮದಲ್ಲಿರುವ ರಾಜ್ಯ– ಕೇಂದ್ರ ಸರ್ಕಾರ, ಶಾಸಕ, ಸಂಸದರಿಗೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸುನಂದ ಜಯರಾಂ, ಅಂಬುಜಮ್ಮ, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ಇಂಡುವಾಳು ಬಸವರಾಜ್, ಕೃಷ್ಣಪ್ರಕಾಶ್, ಫಯಾಜ್, ಮಹಾಂತಪ್ಪ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!