Thursday, September 19, 2024

ಪ್ರಾಯೋಗಿಕ ಆವೃತ್ತಿ

ಸುಪ್ರೀಂ ಕೋರ್ಟ್ ತೀರ್ಪು ಸಾಮಾಜಿಕ ನ್ಯಾಯದ ವಿರುದ್ಧ

ಆರ್ಥಿಕ ವಾಗಿ ಹಿಂದುಳಿದ ವರ್ಗಗಳ EWS (economically weaker section) ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ.10 ಮೀಸಲಾತಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಇದು ಸಾಂವಿಧಾನಿಕ ಮತ್ತು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ.

ಕರ್ನಾಟಕದಲ್ಲಿ ಬ್ರಾಹ್ಮಣ, ವೈಶ್ಯ, ನಗರ್ತ ಮತ್ತು ಮೊದಲಿಯಾರ್ ಸಮುದಾಯಕ್ಕೆ ಈ 10% ಮೀಸಲಾತಿಯ ಲಾಭ ಸಿಗಲಿದೆಯಂತೆ.

ಕರ್ನಾಟಕದಲ್ಲಿ ಈ ಸಮುದಾಯಗಳ ಜನಸಂಖ್ಯೆ ಶೇಕಡಾ 4 ರಷ್ಟು ಇರಬಹುದು. ಇಷ್ಟು ಜನಸಂಖ್ಯೆಗೆ ಶೇ. 10 ಮೀಸಲಾತಿ ನೀಡುವುದು ತೀರಾ ಅವೈಜ್ಞಾನಿಕ ನಿರ್ಧಾರ ಎಂಬುದು ತಜ್ಞರ ಅಭಿಪ್ರಾಯ.

ಸರಕಾರದ ಈ 10% EWS ಮೀಸಲಾತಿಯಲ್ಲಿ ಲಿಂಗಾಯತ, ಒಕ್ಕಲಿಗ, ಇತರ ಆರ್ಥಿಕ ವಾಗಿ ಹಿಂದುಳಿದ ವರ್ಗಗಳ ಬಡವರು ಸೇರುವುದಿಲ್ಲ.

ಈ ಹಿನ್ನೆಲೆಯಲ್ಲಿ ಈ 10% ಮೇಲ್ಜಾತಿ ಬಡವರ ಮೀಸಲಾತಿ ಬಗ್ಗೆ ವಿಸ್ತೃತ ಚರ್ಚೆ ನಡೆಯುವ ಅಗತ್ಯವಿದೆ. ಈ ಕುರಿತು ಸಾರ್ವಜನಿಕ, ಸಾಂವಿಧಾನಿಕ ಹಾಗೂ ಮೀಸಲಾತಿ ತಜ್ಞರ ಚರ್ಚೆಗೆ ಅವಕಾಶ ನೀಡಬೇಕು.

ಶ್ರೀನಿವಾಸ ಕುಮಾರ
ಅಖಿಲ ಭಾರತ ವಕೀಲರ ಒಕ್ಕೂಟ (AILU) ರಾಜ್ಯ ಕಾರ್ಯದರ್ಶಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!