ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದಿದ್ದಾರೆ, ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ ಕೊಡಬೇಕು ಎಂದು ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಟ್ರಾನ್ಸ್‌ಫರ್‌ನಲ್ಲಿ 150 ಕೋಟಿ ರೂ., ಜಲಧಾರೆ ಯೋಜನೆಯಲ್ಲಿ 100 ಕೋಟಿ ರೂ., ಅಧಿಕಾರಗಳ ಬಳಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು.
ಎಷ್ಟು ಬ್ಲಾಕ್ ಮನಿ ವೈಟ್ ಮಾಡಿದ್ದಾರೆ ಗೊತ್ತಾ?ಎನ್ ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾರೆ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ, ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದ್ದು, ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲಾಕ್ ಮನಿ ವೈಟ್ ಮಾಡಿದ್ದಾರೆ. ಅದೆಲ್ಲವೂ ಆಚೆ ಬರುತ್ತದೆ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬ್ಯಾಂಕ್ ಮಾಲೀಕರ ಹತ್ತಿರ ಎಷ್ಟು ಕಲೆಕ್ಷನ್ ಮಾಡ್ತಿದ್ದಾರೆ. ಎಲ್ಲವೂ ಜನರಿಗೆ ಗೊತ್ತಿದೆ ಎಂದು ದೂರಿದರರು.
ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್ ಸೊಸೈಟಿ ಸರಿಯಾಗಿ ತನಿಖೆ ನಡೆಸಿದರೆ ಸಾಕು. ಸಿದ್ದರಾಮಯ್ಯ ತನಿಖೆ ಮಾಡಿಸಿದರೆ ಬ್ಲಾಕ್ ಹೇಗೆ ವೈಟ್ ಆಗ್ತಿದೆ. ಯಾವ ಯಾವ ಥಿಯೇಟರ್ ತಗೋಳ್ಳದಕ್ಕೆ ಸಹಾಯ ಆಗಿದೆ ಗೊತ್ತಾಗುತ್ತೆ ಎಂದು ಕಿಡಿಕಾರಿದರು.
ಜಮೀರ್ ಜೊತೆ ಮಾತಿಲ್ಲ
ಕಾಂಗ್ರೆಸ್ ಸರ್ಕಾರದ ಸಚಿದ್ವಯರ ನಡುವೆ ಮಾತಿಲ್ಲ, ಕತೆಯಿಲ್ಲ. ದೋಸ್ತಿಗಳ ನಡುವೆ ಮಹಾ ಬಿರುಕು ಉಂಟಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಹೇಳಿದ್ದಾರೆ.
ಸಚಿವರಾದ ಜಮೀರ್, ಚಲುವರಾಯಸ್ವಾಮಿ ಕಳೆದ ಏಳೆಂಟು ತಿಂಗಳಿಂದ ಮಾತನಾಡ್ತಿಲ್ಲ. ಚಲುವರಾಯಸ್ವಾಮಿ ಪರ ಕ್ಯಾಂಪೇನ್ ಗೂ ಬರಲಿಲ್ಲ. ಮುನಿಸಿಗೆ ಕಾರಣ ಏನೆಂದು ಚೆಲುವರಾಯಸ್ವಾಮಿ ಉತ್ತರ ಕೊಡ್ತಾರಾ? ಕುಮಾರಸ್ವಾಮಿ ಫಾರೀನ್ ಗೆ ಹೋಗುವ ಬಗ್ಗೆ ಮಾತನಾಡ್ತಾನೆ. ಕುಮಾರಣ್ಣ ಯಾವುದಾದ್ರು ಕ್ಯಾಸಿನೋಗೆ ಇಸ್ವೀಟ್ ಆಡೋಕೆ ಹೋಗಿದ್ರಾ.? ಆದ್ರೆ ಚಲುವರಾಯಸ್ವಾಮಿ ಆ ಕೆಲಸ ಮಾಡ್ತಾನೆ.
ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆ ಆಗಿತ್ತು, ಏನೇನಾಗಿತ್ತು ಮುಂದಿನ ದಿನಗಳಲ್ಲಿ ತಿಳಿಸ್ತೀನಿ ಎಂದು ತಿರುಗೇಟು ನೀಡಿದರು.
ಜಮೀರ್, ಚಲುವರಾಯಸ್ವಾಮಿ ದೋಸ್ತಿಗಳು, ಆಪ್ತಮಿತ್ತರು, ಅವರು, ಈಗ್ಯಾಕೆ ಮಾತನಾಡ್ತಿಲ್ಲ ?
ಒಂದು ಕಾಲದಲ್ಲಿ ಜಮೀರ್ ಸಾಹೇಬ್ರು ಆತನಿಗೆ ನೆಂಟರಲ್ವ?..ಈಗ್ಯಾಕೆ ಇಲ್ಲ. ಈತ ಸ್ನೇಹದ್ರೋಹಿ, ಮಿತ್ರದೋಹಿ ಕೆಲಸವನ್ನ ಕರಗತ ಮಾಡ್ಕೊಂಡಿರೋನು. ಇವನು ಕುಮಾರಣ್ಣನ ಬಗ್ಗೆ ಮಾತನಾಡ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.




