Saturday, October 19, 2024

ಪ್ರಾಯೋಗಿಕ ಆವೃತ್ತಿ

ಕೃಷಿ ಕ್ಷೇತ್ರ ಸದೃಢವಾದರೆ ದೇಶದ ಸುಸ್ಥಿರ ಅಭಿವೃದ್ಧಿ; ಚಲುವರಾಯಸ್ವಾಮಿ

ಕೃಷಿ ಕ್ಷೇತ್ರ ಸದೃಢವಾದರೆ ಮಾತ್ರ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಕೃಷಿ ವಿ.ವಿ.ಗಳು ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಬೇಕಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯದ 59 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು‌.

ಕೃಷಿ ಕ್ಷೇತ್ರಕ್ಕೆ ಹಚ್ಚಿನ ಆದ್ಯತೆ ಜೊತೆಗೆ ತಾಂತ್ರಿಕ ,ವೈಜ್ಞಾನಿಕ ನೆರವು ಅಗತ್ಯ . ರಾಜ್ಯ ಸರ್ಕಾರ ಈ ಬಗ್ಗೆ ವಿಶೇಷ ಗಮನ ಹರಿಸಿದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಾಗುತ್ತಿರಬೇಕು.ಸುಧಾರಿತ ತಳಿಗಳು ,ಯಂತ್ರೋಪಕರಣಗಳನ್ನು ಕಂಡು ಹಿಡಿದು ಸುಲಭವಾಗಿ ರೈತರಿಗೆ ತಲುಪಿಸುವ ಹಾಗೂ ಕೃಷಿ ಪೂರಕ ಚಟುವಟಿಕೆಗಳಿಗೆ ಬಲ ತುಂಬುವ ಕೆಲಸ ಮಾಡಬೇಕು ಎಂದು ಚಲುವರಾಯಸ್ವಾಮಿ ತಿಳಿಸಿದರು.

ರಾಜ್ಯದ ಅಭಿವೃದ್ಧಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ .ಬೆಂಗಳೂರು ಕೃಷಿ ವಿ.ವಿ ಕೂಡ ಅವರ ದೂರ ದೃಷಿ ಚಿಂತನೆ ಫಲ. ಕರ್ನಾಟಕದ ಕೃಷಿ, ಕೈಗಾರಿಕೆ , ನೀರಾವರಿ, ವಿಜ್ಞಾನ ತಂತ್ರಜ್ಞಾನದ ಅಭ್ಯುದಯಕ್ಕೆ ಮೈಸೂರು ಅರಸರು ಹಾಗೂ ಮಹಾರಾಣಿ ಕೆಂಪ ನಂಜಮ್ಮಣ್ಣಿ ಅಪರ ಉದಾರ ನೆರವು ಸ್ಮರಣೀಯ ಎಂದು ಸಚಿವರು ಹೇಳಿದರು.

ದೇಶದ ಪ್ರತಿಷ್ಠಿತ ಕೃಷಿ ವಿಶ್ವ ವಿದ್ಯಾನಿಲಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಕೃಷಿ ವಿ.ವಿ ಹೊಸ ಕೃಷಿ ಸಂಶೋಧನೆಗಳು ಹಾಗೂ ಅವುಗಳನ್ನು ರೈತರಿಗೆ ತಲುಪಿಸುವಲ್ಲಿಯೂ ಅಗ್ರ ಸ್ಥಾನದಲ್ಲಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಕೃಷಿ ಪದವಿಧರರು ಸ್ವ ಉದ್ಯೋಗ ಮೂಲಕ ಇತರರಿಗೆ ಕೆಲಸ ನೀಡುವಂತಾಗಬೇಕು ಎಂದ ಅವರು
ಅಮೇರಿಕಾ ಪ್ರವಾಸದ ವೇಳೆ ಕೃಷಿ ಯಾಂತ್ರೀಕರಣದ ಗುಣಾತ್ಮಕ ಪರಿಣಾಮಗಳನ್ನು ಗಮನಸಿದ್ದು ಇಲ್ಲಿಯೂ ಅವುಗಳನ್ನು ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಇದೇ ವೇಳೆ ಕನ್ನಡಕ್ಕೆ ‌ಮೊದಲ ಆದ್ಯತೆ ನೀಡಿರುವ ಬೆಂಗಳೂರು ಕೃಷಿ.ವಿ.ವಿ.ಯ ಹೊಸ ಲೋಗೋ, ಹೊಸ ತಂತ್ರಾಂಶಗಳನ್ನು ಸಚಿವರು ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

ಬೆಂಗಳೂರು ಕೃಷಿ ವಿ.ವಿ ಉಪ ಕುಲಪತಿ ಸುರೇಶ್ ,ರಿಜಿಸ್ಟ್ರಾರ್ ಕೆ.ಸಿ ನಾರಾಯಣ ಸ್ವಾಮಿ, ಆಡಳಿತ ಮಂಡಳಿಯ ಸದಸ್ಯರು, ಬೋಧಕ ವಿಭಾಗದ ಮುಖ್ಯಸ್ಥರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!