Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಯಿತೇ ? ಕೇಜ್ರಿವಾಲ್ ನಿವಾಸದಲ್ಲಿ ನಿಜಕ್ಕೂ ನಡೆದಿದ್ದೇನು ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ಕನಿಷ್ಠ ಏಳರಿಂದ ಎಂಟು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದಾನೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಹಲ್ಲೆ ಸಂಬಂಧ ಸ್ವಾತಿ ಮಲಿವಾಲ್ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಸ್ವಾತಿ ದೂರಿನಲ್ಲಿ ವಿವರಿಸಿದ್ದಾರೆ.

“ಕೇಜ್ರಿವಾಲ್ ಅವರ ವೈಯಕ್ತಿಕ ಸಹಾಯಕ ಬಿಭವ್ ಕುಮಾರ್ ನನಗೆ 7-8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ನಾನು ಎಷ್ಟೇ ಮನವಿ ಮಾಡಿಕೊಂಡರೂ ಪದೇ ಪದೇ ನನ್ನ ಹೊಟ್ಟೆ ಮತ್ತು ಸೊಂಟಕ್ಕೆ ಒದ್ದಿದ್ದಾನೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

“>

ಘಟನೆಯು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ನಡುವೆಯೇ ಸಿಎಂ ನಿವಾಸದಲ್ಲಿ ಭದ್ರತಾ ಸಿಬ್ಬಂದಿ, ಬಿಭವ್ ಕುಮಾರ್ ಹಾಗೂ ಸ್ವಾತಿ ಮಲಿವಾಲ್ ನಡುವೆ ನಡೆದಿದ್ದ ತೀವ್ರ ವಾಗ್ವಾದವನ್ನು ತೋರಿಸುವ ಹೊಸ ವೀಡಿಯೋವೊಂದು ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.

ಇದನ್ನು ಐಎಎನ್‌ಎಸ್ ಸುದ್ದಿಸಂಸ್ಥೆ ಕೂಡ ಪ್ರಕಟಿಸಿದ್ದು, ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದೆ.

ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿರುವ 52 ಸೆಕೆಂಡ್‌ನ ವಿಡಿಯೋ ಕ್ಲಿಪ್‌ನಲ್ಲಿ ಭದ್ರತಾ ಸಿಬ್ಬಂದಿಗಳು ಮಲಿವಾಲ್ ಅವರನ್ನು ಆವರಣದಿಂದ ತೊರೆಯುವಂತೆ ಮನವಿ ಮಾಡುತ್ತಿರುವುದು ಕಾಣಬಹುದು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಲಿವಾಲ್, “ತೇರಿ ಭಿ ನೌಕ್ರಿ ಖಾವೂಂಗಿ… ಯೇ ಗಾಂಜಾ ಸಾಲಾ(ನಿನ್ನ ಕೆಲಸ ಸಹ ಹೋಗಬಹುದು, ಎ ಗಾಂಜಾ ಸಾಲಾ)” ಎಂದು ಹೇಳುವುದನ್ನು ಕೇಳಬಹುದು.

ಈ ವಿಡಿಯೋ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಬಂದ ಸಂಸದೆಯನ್ನು ಭದ್ರತಾ ಸಿಬ್ಬಂದಿ ತಡೆಯುತ್ತಾರೆ. ಹೀಗಾಗಿ ಅಲ್ಲಿಗೆ ಬಂದ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್, “ನೀವು ಈಗ ಭೇಟಿ ಮಾಡಲು ಸಾಧ್ಯವಿಲ್ಲ. ನೀವು ಇಲ್ಲಿಂದ ಹೊರಡಿ” ಎಂದು ಸ್ವಾತಿ ಮಲಿವಾಲ್ ಗೆ ಸೂಚಿಸುತ್ತಾರೆ.

“>

“ಈ ವೇಳೆ, ಇಲ್ಲ ನಾನು ಇಲ್ಲಿಯೇ ಇರುತ್ತೇನೆ. ನೀವು ನನ್ನ ಮೇಲೆ ದಬ್ಬಾಳಿಕೆ ನಡೆಸಿದರೆ, ನನ್ನನ್ನು ಮುಟ್ಟಿದರೆ ನಾನು ಪೊಲೀಸರಿಗೆ ಕರೆ ಮಾಡಬೇಕಾಗುತ್ತದೆ” ಎಂದು ಸ್ವಾತಿ ಹೇಳುತ್ತಾರೆ. “ಮುಂದೆ ನಿಮ್ಮ ಕೆಲಸ ಸಹ ಹೋಗಬಹುದು ಎಂದು ಎಚ್ಚರಿಸುತ್ತಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ಸ್ವಾತಿ ಅವರು, ಬಿಭವ್‌ಗೆ ‘ಗಾಂಜಾ ಸಾಲಾ’ ಎಂದು ಸ್ವಾತಿ ಮಲಿವಾಲ್ ಕರೆದಿರುವಲ್ಲಿಗೆ ವಿಡಿಯೋ ಕಟ್ ಆಗುತ್ತದೆ. ಇದಾದ ನಂತರ ಹಲ್ಲೆ ನಡೆದಿರಬಹುದು ಎಂದು ವರದಿಯಾಗಿದೆ.

“ಬಿಭವ್ ಎಂಟು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ನನ್ನ ಎದೆಗೆ ಕಾಲಿನಿಂದ ಒದ್ದಿದ್ದಾರೆ” ಎಂದು ಆರೋಪಿಸಿದ್ದು ಈ ಸಂಬಂಧ ಬಿಭವ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ವಿಚಾರಣೆ ಹಾಜರಾಗುವಂತೆ ಮಹಿಳಾ ಆಯೋಗ ಕೂಡ ನೋಟಿಸ್ ನೀಡಿತ್ತು. ಆದರೆ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ವಿಚಾರಣೆಗೆ ಹಾಜರಾಗಿಲ್ಲ ಎಂದು ವರದಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!