Friday, November 20, 2026

ಪ್ರಾಯೋಗಿಕ ಆವೃತ್ತಿ

ತಗ್ಗಹಳ್ಳಿ ವೆಂಕಟೇಶ್ ಗೆ ನೋಟೀಸ್ ಜಾರಿ ಮಾಡಿದ ಜೆಡಿಎಸ್

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ರವೀಂದ್ರ ಶ್ರೀಕಂಠಯ್ಯ ಅವರನ್ನು ಜೆಡಿಎಸ್ ಪಕ್ಷ ಘೋಷಿಸಿದ್ದು,ಇನ್ನು ಮುಂದೆ ಅವರ ವಿರುದ್ಧ ಮಾತನಾಡದೆ, ಅವರ ಪರ ಕೆಲಸ ಮಾಡುವಂತೆ ತಗ್ಗಹಳ್ಳಿ ವೆಂಕಟೇಶ್ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಚುನಾವಣಾ ಉಸ್ತುವಾರಿ ಆರ್.ಲಿಂಗಪ್ಪ ನೋಟೀಸ್ ಜಾರಿ ಮಾಡಿದ್ದಾರೆ.

ನೀವು ಸಹ ಅಭ್ಯರ್ಥಿಯಾಗಲು ಪಕ್ಷದ ವತಿಯಿಂದ ಪ್ರಯತ್ನಿಸಿರುವುದು ತಪ್ಪಲ್ಲ. ಆದರೆ ಪಕ್ಷ ಈಗಾಗಲೇ ರವೀಂದ್ರ ಶ್ರೀಕಂಠಯ್ಯ ರವರನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ತೀರ್ಮಾನಿಸಿ, ಘೋಷಿಸಿರುವುದರಿಂದ ನಿಮ್ಮ ಮನವಿಯನ್ನು ಪರಿಗಣಿಸಲಾಗುವುದಿಲ್ಲ. ಪಕ್ಷವು ಈಗಾಗಲೇ ನಿಮ್ಮನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಮಾನಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ನಿಮ್ಮನ್ನು ಗೌರವಯುತವಾಗಿ ಪಕ್ಷವು ನಡೆಸಿಕೊಳ್ಳುತ್ತದೆ. ನೀವು ತಕ್ಷಣ ಶ್ರೀರಂಗಪಟ್ಟಣದಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗುವ ಅಭಿಲಾಷೆಯನ್ನು ಬಿಟ್ಟು, ಪಕ್ಷದ ಅಧಿಕೃತ, ಘೋಷಿತ ರವೀಂದ್ರ ಶ್ರೀಕಂಠಯ್ಯನವರ ಪರ ಕೆಲಸ ಮಾಡಬೇಕೆಂದು ಹಾಗೂ ಪತ್ರಿಕಾ ಹೇಳಿಕೆಗಳಿಂದ ಪಕ್ಷಕ್ಕೆ ಹಾಗೂ ನಾಯಕರುಗಳಿಗೆ ಮುಜುಗರ ತರುವ ಕೆಲಸ ನಿಲ್ಲಿಸಬೇಕೆಂದು ಪಕ್ಷವು ಸೂಚಿಸುತ್ತದೆ.

ಈ ನೋಟೀಸ್ ತಲುಪಿದ 5 ದಿನಗಳ ಒಳಗೆ ನೀವು ಪಕ್ಷದ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಖುದ್ದು ಭೇಟಿ ಮಾಡಬೇಕು ಹಾಗೂ ಸಮಂಜಸ ಉತ್ತರವನ್ನು ಬರವಣಿಗೆಯಲ್ಲಿ ತಿಳಿಸುವುದು, ತಪ್ಪಿದಲ್ಲಿ ಪಕ್ಷವು ನಿಮ್ಮ ವಿಷಯದಲ್ಲಿ ಶಿಸ್ತು ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ. ಇಂತಹ ಸಮಯದಲ್ಲಿ ಪಕ್ಷದ ಪರವಾಗಿ ತಾವು ನಿಲ್ಲುತ್ತಿರೆಂದು ಆಶಿಸುತ್ತೇನೆ. ನಿಮ್ಮ ಬಗ್ಗೆ ಅಪಾರ ಗೌರವವಿರುವುದರಿಂದ ಶಿಸ್ತುಕ್ರಮಕ್ಕೆ ಅವಕಾಶ ನೀಡುವುದಿಲ್ಲವೆಂದು ತಿಳಿದಿರುತ್ತೇನೆ ಮತ್ತು ಈ ಕಾರಣ ಕೇಳಿ ನೋಟೀಸ್ ನೀಡಲು ಪಕ್ಷದ ವರಿಷ್ಠರಿಂದ ನಿರ್ದೇಶಿತನಾಗಿದ್ದೇನೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ