Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡು ಸರ್ಕಾರಿ ಶಾಲೆಯಲ್ಲಿ ಬೆಳಗಿನ ಉಪಹಾರ

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಇಲ್ಲಿವರೆಗೂ ಒಂದಲ್ಲೊಂದು ಜನಪರ ಯೋಜನೆಗಳಿಗೆ ಚಾಲನೆ ನೀಡುತ್ತಲೇ ಬರುತ್ತಿದ್ದಾರೆ ಇದೀಗ ಮತ್ತೊಂದು ಮಹತ್ವದ ಯೋಜನೆಯನ್ನು ಜಾರಿ ಗೊಳಿಸಿದ್ದಾರೆ.

ತಮಿಳು ನಾಡಿನ ಸರ್ಕಾರಿ ಶಾಲೆಯಲ್ಲಿ 1 ರಿಂದ 5 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಬೆಳಗಿನ ಉಪಹಾರ ನೀಡಲು ನಿರ್ಧರಿಸಿದ್ದು ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಈ ಯೋಜನೆಯು ಸಹಕಾರಿಯಾಗಿದೆ.

ಒಟ್ಟು 33.56 ಕೋಟಿಗಳಲ್ಲಿ ಪ್ರಾರಂಭವಾಗಿರುವ ಯೋಜನೆಯ ಫಲಾನುಭವಿಗಳು 1.14 ಲಕ್ಷ ವಿದ್ಯಾರ್ಥಿಗಳು ಹಾಗೆ ತಮಿಳುನಾಡಿನಲ್ಲಿರುವ 1,545 ಸರ್ಕಾರಿ ಶಾಲೆಗಳೆಗೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.

ಯೋಜನೆಯ ಕುರಿತು ಮಾತನಾಡಿರುವ ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರು. ನಾನು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳು ಬೆಳಗಿನ ತಿಂಡಿಮಾಡದೇ ಬರುವುದನ್ನು ಗಮನಿಸಿದ್ದೆ. ಹಾಗೇ ಬೆಳಗಿನ ಉಪಹಾರ ನೀಡುವುದರಿಂದ ಬಡ ಮಕ್ಕಳಲ್ಲಿ ವಿಟಮಿನ್ ಕೊರತೆ ನೀಗುವುದರ ಜೊತೆಗೆ ಶಾಲೆಗಳಿಗೆ ದಾಖಲಾತಿ ಹೆಚ್ಚಾಗಲು ಪೂರಕವಾಗಿದ್ದು. ಗುಣಮಟ್ಟದ ಶಾಲೆಗಳನ್ನು ನಿರ್ಮಾಣ ಮಾಡಲು ಈ ಯೋಜನೆಯು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!