Wednesday, June 12, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಕರು ಪ್ರತಿಭೆ ಗುರುತಿಸಿ ಪ್ರೇರಣೆ ನೀಡಲಿ

ಪ್ರತಿಯೊಂದು ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆಯಿರುತ್ತದೆ, ಗುರುತಿಸಿ ಪ್ರೇರಣೆ ನೀಡುವ ಶಕ್ತಿ ಶಿಕ್ಷಕರಲ್ಲಿದ್ದರೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಾಡಿಗೆ ನೀಡಬಹುದು ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಇನ್ವೆಂಚರ್ ಅಶೋಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ದಕ್ಷಣ ವಲಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಕ್ಕೆ ಶಿಕ್ಷಕರು ಪ್ರೇರಣೆ ನೀಡಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿದರೆ, ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಇನ್ವೆಂಚರ್ ಅಶೋಕ ಶಾಲೆ ಅಧ್ಯಕ್ಷ ಅಶೋಕ್ ಜಯರಾಂ ಮಾತನಾಡಿ, ಕಳೆದ ಹಲವು ವರ್ಷಗಳ ಹಿಂದೆ ಗ್ರಾಮೀಣ ಜನರ ಸೇವೆ ಮಾಡಲು ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎನ್‌ಜಿಓ ಸ್ಥಾಪನೆ ಮಾಡಿ, ಆರೋಗ್ಯ, ಸ್ವಚ್ಛತೆ, ಸಮಾಜ ಕಟ್ಟುವ ಸೇವಾ ಕಾರ್ಯಗಳನ್ನು ನೀಡುತ್ತ ಬರುತ್ತಿದ್ಧೇವೆ, ಸ್ಥಳೀಯ ವಿದ್ಯಾರ್ಥಿಗಳಿಗೆ ನರ್ಸಿಂಗ್ ತರಬೇತಿ, ಲ್ಯಾಬ್ ತಂತ್ರಜ್ಞಾನದ ತರಬೇತಿ ಕೋರ್ಸ್ ಗಳ ಶಿಕ್ಷಣ ನೀಡಿ ಉತ್ತಮ ಭವಿಷ್ಯ ರೂಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರದ ಶಿಕ್ಷಣಾಧಿಕಾರಿ ಚಂದ್ರಕಲಾ, ಕ್ಷೇತ್ರ ಸಮನ್ವಯ ಅಧಿಕಾರಿ ಎನ್. ಉಮೇಶ್, ಡಯಟ್ ಪ್ರಭಾರ ಉಪ ನಿರ್ದೇಶಕ ಎನ್.ಎಂ.ರಾಮು, ಪ್ರಾಂಶುಪಾಲೆ ಶೃತಿ, ಮುಖ್ಯ ಶಿಕ್ಷಕಿ ಲಿಖಿತ, ಶ್ವೇತಾ, ವಿದ್ಯಾ, ಪ್ರಿಯ, ಕೆ.ಪ್ರತಿಭಾ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ನಾಗರಾಜು, ಆರ್.ಜೆ.ರಾಮು, ಟಿ. ರವಿಶಂಕರ್, ಆರ್.ದೇವರಾಜು, ಎಂಇ ಶಿವಣ್ಣ, ದೇವರಾಜು, ಕೆಆರ್ ಶಿವಕುಮಾರ್ ಶೆಟ್ಟಿ, ಜಯಶಂಕರ್, ಅಶೋಕ್ ಹಾಗೂ ನಾಗರಾಜು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!