Thursday, September 19, 2024

ಪ್ರಾಯೋಗಿಕ ಆವೃತ್ತಿ

ತೀಸ್ತಾ ಸೆಟಲ್ವಾಡ್ ಯಾರು?

1962 ರಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದ ತೀಸ್ತಾ ಸೆಟಲ್ವಾಡ್ ಮುಂಬೈ ಮೂಲದ ವಕೀಲ ಅತುಲ್ ಸೆಟಲ್ವಾಡ್ ಮತ್ತು ಅವರ ಪತ್ನಿ ಸೀತಾ ಸೆಟಲ್ವಾಡ್ ಅವರ ಪುತ್ರಿ. ಆಕೆಯ ತಂದೆಯ ಅಜ್ಜ M. C. ಸೆಟಲ್ವಾಡ್, ಭಾರತದ ಮೊದಲ ಅಟಾರ್ನಿ ಜನರಲ್.  ಸೆಟಲ್ವಾಡ್ ಅವರು ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತರಾಗಿ ಪತ್ರಕರ್ತರಾಗಿದ್ದ ಜಾವೇದ್ ಆನಂದ್ ಅವರನ್ನು ವಿವಾಹವಾಗಿದ್ದಾರೆ.

ತೀಸ್ತಾ ಸೆಟಲ್ವಾಡ್ ಅವರು ನಾಗರಿಕರ ನ್ಯಾಯ ಮತ್ತು ಶಾಂತಿ (ಸಿಜೆಪಿ) ವೇದಿಕೆಯ ಕಾರ್ಯದರ್ಶಿಯಾಗಿದ್ದಾರೆ. ಸಿಜೆಪಿ 2002 ರಲ್ಲಿ ಗುಜರಾತ್ ರಾಜ್ಯದಲ್ಲಿ ಕೋಮು ಹಿಂಸಾಚಾರಕ್ಕೆ ಒಳಗಾದವರಿಗೆ ನ್ಯಾಯಕ್ಕಾಗಿ ಹೋರಾಡಲು ರಚಿಸಲಾದ ಒಂದು ಸಂಘಟನೆಯಾಗಿದೆ. 2002 ರ ಗುಜರಾತ್‌ ಗಲಭೆ ಕುರಿತು ಸಿಜೆಪಿ ಸಹ-ಅರ್ಜಿದಾರರಾಗಿದ್ದು, ನರೇಂದ್ರ ಮೋದಿ ಮತ್ತು ಇತರ ಅರವತ್ತೆರಡು ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಬೇಕೆಂದು ಕೋರಿದೆ.

ತೀಸ್ತಾ ತನ್ನ ಪತಿ ಜಾವೇದ್ ಆನಂದ್ ಅವರೊಂದಿಗೆ Cammunalisam cambat ನಿಯತಕಾಲಿಕದ ಸಹ-ಸ್ಥಾಪಕ ಮತ್ತು ಸಹ ಸಂಪಾದಕರಾಗಿದ್ದಾರೆ.ಅವರು ಪೀಪಲ್ಸ್ ಯೂನಿಯನ್ ಫಾರ್ ಹ್ಯೂಮನ್ ರೈಟ್ಸ್ (ಪಿಯುಹೆಚ್ಆರ್) ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ತೀಸ್ತಾರವರು ಬರೆದ Foot Soldier of the Constitution ಪುಸ್ತಕವು ಬಹಳಷ್ಟು ಜನರ ಗಮನಸೆಳೆದಿದ್ದು ಕನ್ನಡ ಸೇರಿದಂತೆ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿದೆ.

ತೀಸ್ತಾ ಸೆಟಲ್ವಾಡ್‌ರವರು ಕರ್ನಾಟಕದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಗೌರಿ ಲಂಕೇಶ್‌ರವರ ನಿಕಟವರ್ತಿಯಾಗಿದ್ದ ಇವರು ಕಳೆದ ವರ್ಷ ಖ್ಯಾತ ಪತ್ರಕರ್ತ ರವೀಶ್‌ ಕುಮಾರ್‌ರವರಿಗೆ ’ಗೌರಿ ಲಂಕೇಶ್‌’ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು.

ಇವರ ಸೇವೆಯನ್ನು ಪರಿಗಣಿಸಿ 2020 ರಲ್ಲಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ (ಯುಬಿಸಿ) ಪ್ರತಿಷ್ಠಿತ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಲೇಖಕಿ ತೀಸ್ತಾ ಸೆಟಲ್ವಾಡ್ ಅವರು “ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು, ಗುಜರಾತ್ ರಾಜ್ಯದಲ್ಲಿ 2002 ರ ಸಾವಿರಾರು ಮುಸ್ಲಿಮರ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾತ್ಯತೀತವಾದಿಯಾಗಿ, ಅವರು ಭಾರತದಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ಬಹುಸಂಖ್ಯಾತತೆ ಮತ್ತು ಧಾರ್ಮಿಕ ಮತಾಂಧತೆಯನ್ನು ಬಹಿರಂಗಪಡಿಸಲು ಮಾನವ ಹಕ್ಕುಗಳು ಮತ್ತು ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು, LGBTQ ಸಮುದಾಯ, ಸ್ಥಳೀಯರ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇದುವರೆಗೂ ಪಿಯುಸಿಎಲ್ ಜರ್ನಲಿಸಮ್ ಫಾರ್ ಹ್ಯೂಮನ್ ರೈಟ್ಸ್ ಅವಾರ್ಡ್ 1993, ಅತ್ಯುತ್ತಮ ಮಹಿಳಾ ಮಾಧ್ಯಮ ವ್ಯಕ್ತಿ, 1993 ರ ಚಮೇಲಿ ದೇವಿ ಜೈನ್ ಪ್ರಶಸ್ತಿ ಜೊತೆಗೆ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ವ್ಯವಹಾರಕ್ಕಾಗಿ ಭಾರತ ಸರ್ಕಾರದಿಂದ 2007 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!