ಇಂದು ಅಖಿಲ ಭಾರತ ವಕೀಲರ ಒಕ್ಕೂಟ ಜಿಲ್ಲಾ ಶಾಖೆ, ಮಂಡ್ಯ ಜಿಲ್ಲಾ ಕೋರ್ಟ್ ಆವರಣದಲ್ಲಿ ಸಭೆ ಸೇರಿ ಖ್ಯಾತ ವಕೀಲೆ ಮತ್ತು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತಿತರರನ್ನು ಬಂಧಿಸಿದ ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ AILU ಸಂಘಟನೆಯ ಅಧ್ಯಕ್ಷ ಬಿ.ಟಿ.ವಿಶ್ವನಾಥ್ ಸಂತ್ರಸ್ಥರ ಪರವಾಗಿ ಹೋರಾಟ ನಡೆಸಿದ ವಕೀಲರನ್ನೇ ಪಿತೂರಗಾರರೆಂದು ಬಂಧಿಸಿದ ಕ್ರಮವು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಬಿಜೆಪಿ ಪಕ್ಷ, ಕೇಂದ್ರ ಮತ್ತು ಗುಜರಾತ್ ಸರ್ಕಾರಗಳು ಬಳಿದ ಮಸಿ ಮತ್ತು ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುರ್ತು ಪರಿಸ್ಥಿತಿಗಿಂತ ಘೋರ ಪರಿಸ್ಥಿತಿ ಇದಾಗಿದೆ ಎಂದರು. ತತ್ಕ್ಷಣ ತೀಸ್ತಾ ಸೆಟಲ್ವಾಡರನ್ನು ಬಿಡುಗಡೆ ಮಾಡಬೇಕೆಂದು ವಕೀಲರೆಲ್ಲರೂ ಆಗ್ರಹಿಸಿ ಘೋಷಣೆ ಕೂಗಿದರು.
ಸಭೆಯನ್ನು ಉದ್ದೇಶಿಸಿ ವಕೀಲರಾದ ಲಕ್ಷ್ಮಣ್ ಮಾತನಾಡುತ್ತಾ ವಕೀಲರಾದ ತೀಸ್ತಾ ಸೆಟಲ್ವಾಡ್ ರನ್ನು ಬಂಧಿಸಿರುವುದು ಖಂಡನೀಯ ಎಂದು ಹೇಳಿದರು. ಖಾನ್ವಿಲ್ಕರ್ ಪೀಠದ ತೀರ್ಪು ಮೇಲ್ಮನವಿಗೆ ಯೋಗ್ಯ ಎಂದು ವಕೀಲ ವೃಂದ ಅಭಿಪ್ರಾಯ ಪಟ್ಟಿತು.
ಪ್ರತಿಭಟನೆಯಲ್ಲಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ಚಂದನ್ ಪದಾಧಿಕಾರಿಗಳಾದ ತಿಮ್ಮೇಗೌಡ ಅರ್ಜುನ್ ಮಂಜುನಾಥ್ ಸುಂಡಳ್ಳಿ, ಆಶ್ವಿನಿ, ರಮ್ಯಾ ಅನ್ನಪೂರ್ಣಮ್ಮ ಅಂಜುಂ, ಸಹಕಾರ ಸಂಘದ ಅಧ್ಯಕ್ಷ ಯೋಗೇಶ್ ಮತ್ತಿತ್ತರ ವಕೀಲರು ಭಾಗವಹಿಸಿದ್ದರು.