ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನಯ್ಯಲಾಲ್ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಇಬ್ಬರು ಆರೋಪಿಗಳನ್ನು ಕೂಡಲೇ ಸಾರ್ವಜನಿಕ ಸ್ಥಳದಲ್ಲಿ ಶಿಕ್ಷೆಗೆ ಒಳಪಡಿಸಬೇಕೆಂದು ಸಮಾನ ಮನಸ್ಕರ ವೇದಿಕೆ ವತಿಯಿಂದ ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ಮಾತನಾಡು, ಈ ಇಬ್ಬರು ಹಂತಕರಿಗೆ ಪಾಕ್ ಮೂಲದ ಉಗ್ರ ಸಂಘಟನೆಗಳ ಜೊತೆ ನಂಟಿದ್ದು, ಹತ್ಯೆಗೂ ಮೊದಲು ಹಲವು ಬಾರಿ ಫೋನ್ ಕರೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಎಲ್ಲಾ ಪತ್ರಿಕೆ, ಮಾಧ್ಯಮಗಳಲ್ಲಿ ಹೊರ ಬಂದಿದೆ. ಈಗಾಗಲೇ ಇವರು ಆರೋಪಿಗಳೆಂದು ತಿಳಿದು ಬಂದಿರುವುದರಿಂದ ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕು. ಇನ್ನು ಮುಂದೆ ಈ ರೀತಿ ಕೃತ್ಯೆಯಾಗದ ರೀತಿ ಅವರಿಗೆ ಪರಿಪಾಠವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತಾನಾಡಿದ ಮೆಣಸಗೆರೆ ರಾಜಣ್ಣ, ಈ ರೀತಿ ಘಟನೆಗಳು ಮರುಕಳಿಸದ ಹಾಗೆ ಎಲ್ಲಾ ರೀತಿಯ ಬಂದೋಬಸ್ತ್ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರಡಕೆರೆ ಯೋಗೇಶ್,ರಘು ವೆಂಕಟೇಗೌಡ,ಕಬ್ಬಾಳಯ್ಯ ,ಭರತೇಶ್,ಗೌತಮ್ ಮುಂತಾದವರಿದ್ದರು.