Thursday, September 19, 2024

ಪ್ರಾಯೋಗಿಕ ಆವೃತ್ತಿ

ತಹಶೀಲ್ದಾರ್ ವಿರುದ್ದ ಅಪಪ್ರಚಾರ : ಕಾನೂನು ಕ್ರಮಕ್ಕೆ ಒತ್ತಾಯ


  • ತಹಶೀಲ್ಧಾರ್ ಕುಂಞ ಮಹಮದ್ ಅವರಿಗೆ ನೈತಿಕ ಬೆಂಬಲ 

  • ಅಪಪ್ರಚಾರ ಮಾಡುವವರ ವಿರುದ್ದ ಕ್ರಮಕ್ಕೆ ಗ್ರಾಮ ಸಹಾಯಕರ ಸಂಘ ಆಗ್ರಹ

ಮಂಡ್ಯ ತಾಲೂಕಿನಲ್ಲಿ  ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕು ದಂಡಾಧಿಕಾರಿ ಕುಂಞ ಅಹಮದ್ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಮತ್ತು ಅವೇಳನಕಾರಿಯಾಗಿ ಯಾವುದೇ ದಾಖಲೆಗಳಿಲ್ಲದೆ ದೂಷಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮಂಡ್ಯ ತಾಲೂಕು ಗ್ರಾಮ ಸಹಾಯಕರ ಸಂಘವು ಒತ್ತಾಯಿಸಿದೆ.

ದಕ್ಷತೆಯಿಂದ ಆಡಳಿತ ನಡೆಸುತ್ತಿರುವ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಪಟ್ಟಪದ್ರ ಹಿತಾಸಕ್ತಿಗಳು, ಷಡ್ಯಂತ್ರ ನಡೆಸುತ್ತಲೇ ಬರುತ್ತಿದ್ದಾರೆ, ಇಂತಹವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಮಂಡ್ಯ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ರಾಜೇಶ್ ಒತ್ತಾಯಿಸಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಮಂಡ್ಯ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕುಂಜಿ ಅಹಮದ್ ಅವರ ಪ್ರಾಮಾಣಿಕತೆ ಮತ್ತು ಜನಸ್ನೇಹಿ ಕಾರ್ಯ ಚಟುವಟಿಕೆಗಳು, ಜನ ಮೆಚ್ಚುಗೆ ಪಡೆದಿವೆ. ಸಾರ್ವಜನಿಕರ ಸ್ಮಶಾನ ಸಮಸ್ಯೆ, ವಯೋವೃದ್ದರ ಪಿಂಚಣಿ ಸಮಸ್ಯೆ, ಭೂ-ವ್ಯಾಜ್ಯಗಳು, ಆಸ್ತಿ-ಸೈಟುಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ಜನಸ್ನೇಹಿಯಾಗಿ ದಕ್ಷತೆಯಿಂದ ಆಡಳಿತ ನಡೆಸುವ ತಹಶೀಲ್ದಾರ್ ಅವರಿಗೆ ಜನಸಮೂಹವು ಹಾಗೂ ಆಡಳಿತ ವರ್ಗವು ಬೆಂಬಲ ವ್ಯಕ್ತಪಡಿಸಿದೆ, ಪರಿಸರ ಪ್ರೇಮಿ ಮತ್ತು ಜನಸ್ನೇಹಿ ಆಗಿರುವ ಅಹಮದ್ ಅವರ ಆಡಳಿತಕ್ಕೆ ಸರ್ವಧರ್ಮೀಯ ಜನರು ಬೆಂಬಲವಿದೆ, ಇಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ಜಿಲ್ಲಾಡಳಿತವು ನೈತಿಕ ಬೆಂಬಲ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!