ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ನಲ್ಲಹಳ್ಳಿ ಗ್ರಾಮದ ಶ್ರೀರಾಮ ಸೇವಾ ಚಾರಿಟಬಲ್ ಟ್ರಸ್ಟ್‌ನ ರಾಮಮಂದಿರ ಜೀರ್ಣೋದ್ಧಾರ ಸಮಿತಿಗೆ ಶ್ರೀಶಂಭು ಸೇವಾ ಟ್ರಸ್ಟ್ ಮತ್ತು ಮನ್ಮುಲ್ ಅಧ್ಯಕ್ಷ ಬಿ.ಆರ್ ರಾಮಚಂದ್ರು 50 ಸಾವಿರ ರೂ.ಗಳ ಚೆಕ್ಕನ್ನು ಆರ್ಥಿಕ ಸಹಾಯವಾಗಿ ನೀಡಿದರು.
ಶ್ರೀರಾಮ ಮಂದಿರ ಜೀರ್ಣೋದ್ಧಾರಕ್ಕೆ ರಾಮಚಂದ್ರು ಅವರು ಉದಾರವಾಗಿ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಅವರಿಗೆ ನಮ್ಮ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಅವರ ಜನಾನುರಾಗಿ ಕೆಲಸಗಳು ಮುಂದುವರೆಯಲಿ ಎಂದು ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಮನ್ಮುಲ್ ಉಪಾಧ್ಯಕ್ಷ ಎಂ.ಎಸ್ ರಘುನಂದನ್, ವೆಂಕಟರಾಮು, ತ್ಯಾಗರಾಜು, ಶಂಕರ್, ಲಿಂಗೇಗೌಡ, ಅಶೋಕ್, ನಾಗರಾಜ್ ಹಾಗೂ ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.




