ಟೆಂಪೊ ಟ್ರಾವೆಲರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಗೆಜ್ಜಲಗೆರೆ ಬಳಿಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೇಲ್ಸೆತುವೆಯಲ್ಲಿ ಜರುಗಿದೆ.
ಟೆಂಪೋ ಚಾಲಕ ನವೀನ್, ಶಂಕರ್, ಶಿಲ್ಪ ಹಾಗೂ ಪರಿಣಿತ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಶ್ರೀನಗರದ ನಿವಾಸಿಗಳಾದ ಎಲ್ಲರೂ ನಂಜನಗೂಡು ನಂಜುಂಡೇಶ್ವರ ದೇವರ ದರ್ಶನಕ್ಕೆ ತೆರಳುತ್ತಿದ್ದರು. ಗೆಜ್ಜಲಗೆರೆ ಮೇಲ್ಸೆತುವೆ ಬಳಿ ಟೆಂಪೊ ಟ್ರಾವೆಲರ್ ಆಕ್ಸಲ್ ತುಂಡಾಗಿ ಈ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




