Friday, September 20, 2024

ಪ್ರಾಯೋಗಿಕ ಆವೃತ್ತಿ

ಏಕಕಾಲದಲ್ಲಿ ಎರಡು ಪರೀಕ್ಷೆ: ಉದ್ಯೋಗಾಕಾಂಕ್ಷಿಗಳ ಪರದಾಟ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವು 384 ಗೆಜೆಟೆಡ್ ಪ್ರೋಬೇಷನರಿ ಹುದ್ದೆಗಳ ಆಯ್ಕೆಗಾಗಿ ಆ.27ರಂದು ಪರೀಕ್ಷೆ ನಡೆಸಲಿದ್ದು, ಅದೇ ದಿನ ಬೆಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ವಿಭಾಗದ ಸ್ನಾತಕೋತ್ತರ (ಎಂ.ಎ) ಕೋರ್ಸ್ ಗಳ ಹಲವು ವಿಷಯಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ ಎರಡೂ ಪರೀಕ್ಷೆಗಳನ್ನು ತೆಗೆದುಕೊಂಡಿರುವ ಅಭ್ಯರ್ಥಿಗಳಿಗೆ ಯಾವುದಾದರೂ ಒಂದು ಪರೀಕ್ಷೆ ಆಯ್ದುಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ತೊಂದರೆಗೆ ಸಿಲುಕಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಅಥವಾ ಬೆಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ವಿಭಾಗವು ತನ್ನ ಪರೀಕ್ಷಾ ದಿನಾಂಕವನ್ನು ಮಾರ್ಪಾಡು ಮಾಡಿ, ಎರಡು ಪರೀಕ್ಷೆಗಳನ್ನು ತೆಗೆದುಕೊಂಡಿರುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಕಾಂಕ್ಷಿಗಳು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!