Wednesday, September 18, 2024

ಪ್ರಾಯೋಗಿಕ ಆವೃತ್ತಿ

ಆರೋಪಿಗೆ ಮರಣದಂಡನೆ ವಿಧಿಸಬೇಕು : ಸಿದ್ದರಾಮಯ್ಯ

10 ವರ್ಷದ ಬಾಲಕಿ ಮೇಲೆ ಬಹಳ ಅಮಾನುಷವಾಗಿ ಅತ್ಯಾಚಾರ ಮಾಡಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮಳವಳ್ಳಿ ಪಟ್ಟಣದಲ್ಲಿರುವ ಬಾಲಕಿಯ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಆರೋಪಿಗೆ ಮರಣದಂಡನೆ ಆಗ್ಬೇಕು. ಹೆಣ್ಣು ಮಕ್ಕಳು ನಂಬಿಕೆ, ವಿಶ್ವಾಸ ಇಟ್ಟುಕೊಂಡು ಟ್ಯೂಷನ್ ಗೆ ಹೋಗ್ತಾರೆ. ಆದರೆ ಗುರುಗಳೇ ಈ ರೀತಿ ನೀಚ ಕೃತ್ಯ ಮಾಡಿದರೆ ಹೇಗೆ? ಬೇಲಿನೆ ಎದ್ದು ಹೊಲ ಮೇಯ್ದಾಗೆ ಆಗುತ್ತೆ. ಅವನು ಪ್ರಾಣಿ ಇದ್ದಾಗೆ, ಆ ತರಹದ ಪ್ರಾಣಿಗೆ ಸಮಾಜದಲ್ಲಿ ಉಳಿಗಾಲ ಇಲ್ಲ. ಅಂತಹವರನ್ನ ಉಳಿಸಬಾರದು, ಮರಣದಂಡನೆ ಕೊಡಬೇಕು. ಪೊಲೀಸರು ಕಠಿಣ ಶಿಕ್ಷೆ ಕೊಡಿಸಬೇಕು ಎಂದರು.

ಪ್ರಾಣಿಗಳು, ರಾಕ್ಷಸರು ಕೂಡ ಈ ರೀತಿ ಕೃತ್ಯ ಮಾಡಲ್ಲ. ಇದು ಅಕ್ಷಮ್ಯ ಅಪರಾಧ. ಯಾವ ಹೆಣ್ಣು ಮಕ್ಕಳಿಗೂ ಈ ತರಹ ಆಗಬಾರದು. ಬಾಲಕಿ ಕುಟುಂಬಸ್ಥರ ಜೊತೆ ಮಾತನಾಡಿ ಅವರಿಗೆ ಧೈರ್ಯ ಹೇಳಿದ್ದೇನೆ ಎಂದರು.

ಆರೋಪಿಗೆ ಮರಣದಂಡನೆ ಆಗ್ಬೇಕು. ಹೆಣ್ಣು ಮಕ್ಕಳು ನಂಬಿಕೆ, ವಿಶ್ವಾಸ ಇಟ್ಟುಕೊಂಡು ಟ್ಯೂಷನ್ ಗೆ ಹೋಗ್ತಾರೆ. ಆದರೆ ಗುರುಗಳೇ ಈ ರೀತಿಬನೀಚ ಕೃತ್ಯ ಮಾಡಿದರೆ ಹೇಗೆ? ಬೇಲಿನೆ ಎದ್ದು ಹೊಲ ಮೇಯ್ದಾಗೆ ಆಗುತ್ತೆ.ಅವನು ಪ್ರಾಣಿ ಇದ್ದಾಗೆ,ಆ ತರಹದ ಪ್ರಾಣಿಗೆ ಸಮಾಜದಲ್ಲಿ ಉಳಿಗಾಲ ಇಲ್ಲ. ಅಂತಹವರನ್ನ ಉಳಿಸಬಾರದು, ಮರಣದಂಡನೆ ಕೊಡಬೇಕು. ಪೊಲೀಸರು ಕಠಿಣ ಶಿಕ್ಷೆ ಕೊಡಿಸಬೇಕು ಎಂದರು.

ಪರಿಹಾರ ವಿತರಣೆ

ಮೃತ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ವೈಯಕ್ತಿಕವಾಗಿ 2 ಲಕ್ಷ ಪರಿಹಾರ ವಿತರಿಸಿದರು. ಮಾಜಿ ಸಚಿವ ಚಲುವರಾಯಸ್ವಾಮಿ 50 ಸಾವಿರ ರೂ.ಪರಿಹಾರ ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಡಾ.ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!