ಸಂಜು ಆಲಕೆರೆ
ಪಂಚು : ಎಷ್ಟು ಕೊಬ್ಬು ಇರ್ಬೇಡ ಈ ನನ್ಮಕ್ಲಿಗೆ, ಊರಿಂದ ಊರಿಗೆ ಬಂದ್ಮೇಲೆ, ಹೀಗ್ ಜೀವ್ನ ಮಾಡಬೇಕು ಅಂತ ಗೊತ್ತಿಲ್ವ..
ಸಂಚು : ಯಾರಿಗೊ ಈ ತರ ಬೈತಿದ್ಯಾ..
ಪಂಚು : ಬೆಂಗಳೂರಿನ ಒಂದು ಹೋಟೆಲಿನ ಎಲ್ ಇ ಡಿ ಡಿಸ್ಪ್ಲೇ ಬೋರ್ಡ್ ನಲ್ಲಿ kannadiga mordarchood ಅಂತ ಹಾಕಿದ್ದಾರೆ,

ಸಂಚು : ಕನ್ನಡ ವಿರುದ್ಧವಾಗಿ ನಡೆದು ಕೊಂಡವರಿಗೆ ಕಠಿಣ ಶಿಕ್ಷೆ ಕೊಡುವವರೆಗೂ ಇದೆಲ್ಲ ತಪ್ಪಿದ್ದಲ್ಲ..
ಪಂಚು : ಗ್ರೇಟರ್ ಬೆಂಗಳೂರು ಅಥಾರಿಟಿ ಏನ್ ಮಾಡ್ತಿದೆ, ಅಂತಾನೆ ಗೊತ್ತಿಲ್ಲ..
ಸಂಚು : ಅದಿನ್ನು ಅಂಬೆಗಾಲು ಹಿಡೋಕೆ ಶುರು ಮಾಡಿದ್ಯೋ ಇಲ್ವೋ..
ಪಂಚು : ಹಾಗಿದ್ರೆ ಬಿಬಿಎಂಪಿ ನಾದ್ರೂ ಏನಾದ್ರು ಮಾಡ್ಬೇಕು ತಾನೇ..
ಸಂಚು : ಕನ್ನಡಕ್ಕೆ ಕನ್ನಡಿಗರಿಗೆ ಏನಾದ್ರೆ ಅವರಿಗೇನು ನಷ್ಟ ಇಲ್ಲ ತಮ್ಮ ಸಂಬಳ ಬಂದ್ರೆ ಸಾಕು ಅಂತ ಇದ್ದಾರೆ ಅನ್ಸುತ್ತೆ..
ಪಂಚು : ಆ ರೀತಿ ಡಿಸ್ಪ್ಲೇ ಹಾಕೋದಿಕ್ಕೆ ಆ ಹೋಟೆಲ್ ನವನಿಗೆ ಕನ್ನಡಿಗರ ಮೇಲೆ ಯಾಕಿಷ್ಟು ಕೋಪ ಅಂತಾನೆ ಗೊತ್ತಿಲ್ಲ,
ಸಂಚು : ಕನ್ನಡಿಗರನ್ನ ಕೆಣಕಿದ ಹಾಗೂ ಕನ್ನಡಿಗರನ್ನ ಬಹಳ ಕೆಟ್ಟದ್ದಾಗಿ ನಿಂದಿಸಿರುವ ಆ ಹೋಟೆಲ್ ಯಾವುದು..
ಪಂಚು : ಸ್ನೇಹಿತರು ಹೇಳಿರಿವಂತೆ Hotel GS SUITES, ಕೋರಮಂಗಲ, ಬೆಂಗಳೂರು
ಸಂಚು : ಒಂದಷ್ಟು ಕನ್ನಡಿಗರು ಹೋಗಿ ಬಿಸಿ ಮುಟ್ಟಿಸಬೇಕು ಮೊದಲು, ಇಲ್ಲ ಅಂದ್ರೆ ಹೆಚ್ಚಿಕೊಳ್ತಾರೆ..
ಪಂಚು : ಪದೇ ಪದೇ ಈ ಹಿಂದಿಗರು ಕನ್ನಡ ನಾಡಿನ ವಿರುದ್ಧ, ಇಲ್ಲಿನ ಭಾಷೆಯ ವಿರುದ್ಧ ಒಂದಲ್ಲಾ ಒಂದು ತಕರಾರು ತೆಗೀತಾ ಇರ್ತಾರೆ ಬಡ್ಡೇತವು,
ಸಂಚು : ಇಂತಹ ಪದ ಬಳಕೆ ತಪ್ಪು ಕಣೋ..
ಪಂಚು : ಆ ಬಡ್ಡಿಮಕ್ಳು ಬಳ್ಸಿರೋ ಪದಗಳು ಒಳ್ಳೆಯದ..
ಸಂಚು : ಅವ್ರ್ ಮಾಡುದ್ರು ಅಂತ ನಾವ್ ಮಾಡೋಕೆ ಆಗುತ್ತಾ..
ಪಂಚು : ಹೀಗೆ ಅನ್ಕೊಂಡೆ ಇಂತ ಪರಿಸ್ಥಿಗೆ ತಲುಪಿರೋದು ನಾವು..
ಸಂಚು : ನೋಡೋಣ ಪೊಲೀಸ್ ನವರು ನಮ್ಮ ಬಿಬಿಎಂಪಿ ರವರು ಏನ್ ಕ್ರಮ ತಗೋತಾರೆ ಅಂತ.
ಪಂಚು : ಇತ್ತೀಚಿಗೆ ಯಾರ ಮೇಲು ಅಷ್ಟು ನಂಬಿಕೆ ಇಲ್ಲ, ಯಾರಿಗೂ ಕನ್ನಡ ಬೇಡಾ ಅನ್ಸುತ್ತೆ.. ಕನ್ನಡ ಹೋರಾಟಗಾರರಿಗೆ ಬೈಯೋಕೆ ಅಂದ್ರೆ ಬಾಯಿ ಬಿಚ್ಚು ನಾಲಾಯಕ್ ಗಳಿಗೆ ಕನ್ನಡ ಪರವಾಗಿ ಧ್ವನಿ ಬರಲ್ಲ..
ಸಂಚು : ನಮ್ಮ ಕನ್ನಡ ಹೋರಾಟಗಾರರಿಂದಲೇ ಬೆಂಗಳೂರಿನಲ್ಲಿ ಕನ್ನಡ ಉಳಿದಿರೋದು ಎಂದರೆ ತಪ್ಪಾಗಲ್ಲ ಬಿಡು..
ಪಂಚು : ಇದು ನಮ್ ಜನರಿಗೆ ಅರ್ಥ ಆಗಲ್ಲ, ಕನ್ನಡ ಕನ್ನಡ ಸಾಯೋದೆ ಈ ಓಲಾಟಗಾರರ ಕೆಲ್ಸ ಅಂತ ಹೀಯಾಳಿಸ್ತಾರೆ ಸ್ವಾಭಿಮಾನ ಮಾರಿಕೊಂಡ ಸೋಂಬೇರಿಗಳು..
ಸಂಚು : ಆ ಹೋಟೆಲ್ ಮುಚ್ಚಿಸಲೇ ಬೇಕು, ಆ ಎಲ್ ಇ ಡಿಯಲ್ಲಿ ಟೈಪ್ ಮಾಡಿದವನ್ನನ್ನು ಗಡಿಪಾರು ಮಾಡಲೇ ಬೇಕು…
ಪಂಚು : ಹೌದು ಹೀಗ್ ಮಾಡಿದ್ರೇನೆ ಬುದ್ಧಿ ಬರೋದು ಅಂತವರಿಗೆ..




