ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಿಂದ ಹೊಸಹೊಳಲು ಚಿಕ್ಕಕೆರೆ ಕೋಡಿವರೆಗೆ ಹೋಗುವ ರಸ್ತೆಯನ್ನು ಆಳೆತ್ತರ ಅಗೆದು ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿರುವ ಘಟನೆ ಜೂ.5ರ ಶುಕ್ರವಾರ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ನಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ಎಸ್.ಬಿ.ಸ್ಪೋರ್ಟ್ ಕ್ಲಬ್ ಮಾರ್ಗವಾಗಿ ತೆರಳುವ ರಸ್ತೆಯನ್ನು ಯಾರೋ ದುಷ್ಕರ್ಮಿಗಳು ಅಗೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಕೂಡಲೇ ಗುಂಡಿ ಮುಚ್ಚಿಸಿ ಅನುಕೂಲ ಮಾಡಿಕೊಡಬೇಕೆಂದು ನಾಗೇನಹಳ್ಳಿ ಗ್ರಾಮಸ್ಥರಾದ ಯೋಗೀಶ್, ವೆಂಕಟೇಶ್, ಕೃಷ್ಣ ಹಾಗೂ ಪ್ರಸಾದ್ ಸೇರಿದಂತೆ ಮತ್ತಿತರರು, ತಹಸೀಲ್ದಾರ್ ಅವರಿಗೆ ದೂರು ನೀಡಿದ್ಧಾರೆ.




