Tuesday, November 17, 2026

ಪ್ರಾಯೋಗಿಕ ಆವೃತ್ತಿ

ರೈತನ ದೇಹ ಹೊತ್ತಿ ಉರಿಯುತ್ತಿತ್ತು

ರೈತನ ದೇಹ ಹೊತ್ತಿ ಉರಿಯುತ್ತಿತ್ತು
ಕಣ್ಣುಗಳು ಜ್ವಾಲೆಯನ್ನೆ ಉಗುಳುತ್ತಿದ್ದವು
ಜ್ವಾಲೆ ಸುಡದೆ ಬಿಡಬಹುದೇ ನಿಮ್ಮನ್ನು ?

ರೈತನ ದೇಹ ಹೊತ್ತಿ ಉರಿಯುತ್ತಿತ್ತು
ಹೃದಯ ಕಣ್ಣೀರ ಹನಿ ಸುರಿಸುತ್ತಿತ್ತು
ಕಣ್ಣೀರ ಪ್ರವಾಹ ಮುಳುಗಿಸದೇ ನಿಮ್ಮನ್ನು ?

ರೈತನ ದೇಹ ಹೊತ್ತಿ ಉರಿಯುತ್ತಿತ್ತು
ಬಟ್ಟೆಗಳೆಲ್ಲ ಬೂದಿಯಾಗಿ ಮಣ್ಣಲ್ಲಿ ಸೇರಿದವು
ಆ ಮಣ್ಣು ತಿನ್ನದೆ ಬಿಡಬಹುದೇ ನಿಮ್ಮನ್ನು?

ರೈತನ ದೇಹ ಹೊತ್ತಿ ಉರಿಯುತ್ತಿತ್ತು
ಭಾವಗಳೆಲ್ಲ ದನಿಯಾಗಲಾರದೆ ಮೌನವಾಗಿದ್ದವು
ಆ ಮೌನ ಕಾಡದೆ ಬಿಡಬಹುದೇ ನಿಮ್ಮನ್ನು ?

– ಶಿವಕುಮಾರ ಆರಾಧ್ಯ ಎಂ ಎನ್

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ